ಕಾಸರಗೋಡು: 36ನೇ ಕೇರಳ ವಿಜ್ಞಾನ ಕಾಂಗ್ರೆಸ್ ಫೆ.8ರಿಂದ 11ರವರೆಗೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆಯಲಿದೆ. ಫೆಬ್ರವರಿ 9 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. 'ಒಂದು ಆರೋಗ್ಯ ದೃಷ್ಟಿಕೋನದ ಮೂಲಕ ಕೇರಳ ಆರ್ಥಿಕತೆಯ ಪರಿವರ್ತನೆ'ಎಂಬುದು 36 ನೇ ಕೇರಳ ವಿಜ್ಞಾನ ಕಾಂಗ್ರೆಸ್‍ನ ಮುಖ್ಯ ವಿಷಯವಾಗಿದೆ. ಯುವ ಸಂಶೋಧಕರು, ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಸಂವಹನ ಮಾಡಲು ಮತ್ತು ಹಂಚಿಕೊಳ್ಳಲು ಕೇರಳ ಸೈನ್ಸ್ ಕಾಂಗ್ರೆಸ್ ಒಂದು ವೇದಿಕೆಯಾಗಲಿದೆ. ವಿಜ್ಞಾನ ಕಾಂಗ್ರೆಸ್‍ನ ಅಂಗವಾಗಿ ವಿವಿಧ ವಿಷಯಗಳ ಕುರಿತು ಪ್ರಮುಖ ವಿಜ್ಞಾನಿಗಳಿಂದ ಉಪನ್ಯಾಸ, 12 ವಿಷಯಗಳಲ್ಲಿ ಆಯ್ಕೆಯಾದ ವೈಜ್ಞಾನಿಕ ಪ್ರಬಂಧಗಳ ಮಂಡನೆ, ಪೆÇೀಸ್ಟರ್ ಪ್ರಸ್ತುತಿ ಮತ್ತು ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ವಿಜೇತರಿಂದ ಪ್ರಬಂಧ ಮಂಡನೆ ನಡೆಯಲಿವೆ. ಸ್ನಾತಕೋತ್ತರ ಪದವಿ ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಗೆ 'ವಿಜ್ಞಾನಿಗಳೊಂದಿಗೆ ನಡಿಗೆ' ಕಾರ್ಯಕ್ರಮ ನಡೆಯಲಿದೆ. ವಿಜ್ಞಾನ ಕಾಂಗ್ರೆಸ್ ನಲ್ಲಿ 424 ಯುವ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. 362 ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಲಾಗುವುದು.
ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ (2022) ಪೆÇ್ರ. ಮಾರ್ಟೆನ್ ಮೆಲ್ಡೆಲ್ ಅವರು 36 ನೇ ವಿಜ್ಞಾನ ಕಾಂಗ್ರೆಸ್‍ನಲ್ಲಿ ಉಪನ್ಯಾಸ ನೀಡಲಿದ್ದಾರೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಉತ್ತಮ ಯುವ ವಿಜ್ಞಾನಿಗಳಿಗೆ ಪ್ರಶಸ್ತಿ ಮತ್ತು ವಿಜ್ಞಾನ-ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ಭಾರತದ ವಿವಿಧ ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್‍ಅಪ್ ಮಳಿಗೆಗಳು ಇರಲಿದೆ. ಸೈನ್ಸ್ ಎಕ್ಸ್‍ಪೋಗಳಿಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಚಿತ ಭೇಟಿ ಇರಲಿದೆ. ಕೇರಳ ವಿಜ್ಞಾನ ಕಾಂಗ್ರೆಸ್ ಅಂಗವಾಗಿ ಜಿಲ್ಲೆಯ ಸ್ಥಳೀಯ ಸಮಸ್ಯೆಗಳಿಗೆ ಉತ್ತಮ ವೈಜ್ಞಾನಿಕ ಪರಿಹಾರಗಳನ್ನು ಪ್ರಸ್ತಾಪಿಸಿದ ಯುವಕರಿಗೆ ವಿಜ್ಞಾನ ಮತ್ತು ನಗದು ಪ್ರಶಸ್ತಿ ನೀಡಲಾಗುವುದು. ಕೇರಳ ಕೌನ್ಸಿಲ್ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಎನ್ವಿರಾನ್ಮೆಂಟ್, ಸೆಂಟರ್ ಫಾರ್ ವಾಟರ್ ರಿಸೋರ್ಸ್ ಡೆವಲಪ್‍ಮೆಂಟ್ ಅಂಡ್ ಯುಟಿಲೈಸೇಶನ್ (ಕೆಎಸ್‍ಸಿಎಸ್‍ಟಿಇ-ಸಿಡಬ್ಲ್ಯೂಆರ್‍ಡಿಎಂ) ಮತ್ತು ಕಾಸರಗೋಡು ಸರ್ಕಾರಿ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೇರಳ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪೆÇ್ರ.ಕೆ.ಪಿ.ಸುಧೀರ್ ಅವರು 36ನೇ ಕೇರಳ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ. ಡಾ.ಸೌಮ್ಯ ಸ್ವಾಮಿನಾಥನ್ ಅಧ್ಯಕ್ಷೆ ಮತ್ತು ಡಾ.ಎಸ್.ಪ್ರದೀಪ್ ಕುಮಾರ್ ಪ್ರಧಾನ ಸಂಚಾಲಕ, ಡಾ.ಮನೋಜ್ ಪಿ ಸ್ಯಾಮ್ಯುಯೆಲ್ ಸಂಘಟನಾ ಸಮಿತಿ ಸಂಚಾಲಕ ಹಾಗೂ 12 ವಿವಿಧ ಉಪಸಮಿತಿಗಳು ವಿಜ್ಞಾನ ಕಾಂಗ್ರೆಸ್ ಯಶಸ್ಸಿಗೆ ಶ್ರಮಿಸುತ್ತಿವೆ.