ನವದೆಹಲಿ: ಬಿಜೆಪಿಯು ಎಎಪಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ಸಚಿವೆ ಅತೀಶಿ ನಿವಾಸಕ್ಕೆ ದೆಹಲಿ ಅಪರಾಧ ವಿಭಾಗದ ಪೊಲೀಸರು ದೌಡಾಯಿಸಿದ್ದಾರೆ.
'ಹೊರಗಡೆ ತೆರಳಿದ ಕಾರಣ ತಮ್ಮ ಕಚೇರಿ ಸಿಬ್ಬಂದಿಗೆ ನೋಟಿಸ್ ಸ್ವೀಕರಿಸುವಂತೆ ಅತೀಶಿ ಸೂಚಿಸಿದ್ದಾರೆ' ಎಂದು ಮೂಲಗಳು ತಿಳಿಸಿವೆ.
'ಪ್ರಕರಣ ಸಂಬಂಧಿಸಿದಂತೆ ಇಂದು(ಭಾನುವಾರ) ಬೆಳಿಗ್ಗೆ ನೋಟಿಸ್ ನೀಡಲು ಸಚಿವೆ ಅತೀಶಿ ನಿವಾಸಕ್ಕೆ ತೆರಳಿದ್ದೆವು. ಅವರು ಸಿಗದಿದ್ದ ಕಾರಣ ಮತ್ತೊಮ್ಮೆ ನೋಟಿಸ್ ನೀಡಲಾಗುವುದು' ಎಂದು ಹಿರಿಯ ಪೊಲೀಸರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ನೋಟಿಸ್ ನೀಡಲಾಗಿತ್ತು.
ಎಎಪಿಯ ಏಳು ಶಾಸಕರನ್ನು ತಲಾ ₹25 ಕೋಟಿ ನೀಡಿ ಖರೀದಿಸಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಅರವಿಂದ ಕೇಜ್ರಿವಾಲ್ ಮತ್ತು ಅತೀಶಿ ಈ ಹಿಂದೆ ಆರೋಪ ಮಾಡಿದ್ದರು
.