ಬದಿಯಡ್ಕ: ರೋಟರಿ ಕ್ಲಬ್ ಬದಿಯಡ್ಕದ ವತಿಯಿಂದ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ ಪ್ರಧಾನ ಕಾಯ9ಕ್ರಮ ಇರಾ ಸಭಾಭವನ ವಳಮಲೆಯಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಬದಿಯಡ್ಕದ ಅಧ್ಯಕ್ಷ ಬಿ.ರಾಧಾಕೃಷ್ಣ ಪೈ ವಹಿಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಅಂತಾರಾಷ್ಟ್ರೀಯ ರೋಟರಿ ಕ್ಲಬ್ ನ ಧ್ಯೇಯೋದ್ದೇಶಗಳನ್ನು ಸಭೆಗೆ ವಿವರಿಸಿ ಮಾತನಾಡಿದರು. ಸನ್ಮಾನಿತ ಹಿರಿಯ ಸಾಮಾಜಿಕ ಧುರಿಣ ಹಾಗೂ ಪ್ರಗತಿಪರ ಸಾವಯವ ಕೃಷಿಕ ಶಂಕರನಾರಾಯಣ ಭಟ್ ಪರ್ಮುಂಡ ಹಾಗೂ ಮುಳ್ಳೇರಿಯ ಸರ್ಕಾರಿ ಹಿರಿಯ ಪ್ರೌಢಶಾಲೆಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪುಷ್ಪಾಂಗಧನ್ ಅವರಿಗೆ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಉಭಯ ಪ್ರಶಸ್ತಿ ಪುರಸ್ಕøತರಿಗೆ ಹಿರಿಯ ಕೃಷಿಕ ಹಾಗೂ ರೊಟೇರಿಯನ್ ಗಂಗಾಧರ ಆಳ್ವ ಹಾಗೂ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯ ಕ್ಷಯರೋಗ ವಿಭಾಗ ಮುಖ್ಯಸ್ಥ, ಶ್ವಾಸಕೋಶ ತಜ್ಞ ನಾರಾಯಣ ಪ್ರದೀಪ್ ಶಾಲು ಹೊದಿಸಿ ಪ್ರಶಸ್ತಿ ಫಲಕಗಳನ್ನಿತ್ತು ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಭಯರು ರೋಟರಿ ಕ್ಲಬ್ ನ ಸೇವಾಕಾರ್ಯಗಳಿಗೆ ಮೆಚ್ಚುಗೆಯ ನುಡಿಗಳನ್ನಾಡಿ ಶ್ಲಾಘಿಸಿದರು.
ರೋಟರಿ ಸದಸ್ಯ ನಿರಂಜನ್ ರೈ ಪೆರಡಾಲಗುತ್ತು ಅವರು ಪ್ರಶಸ್ತಿ ಪುರಸ್ಕøತರು ಮಾಡಿದ ಸೇವಾಕಾರ್ಯಗಳನ್ನು ವಿವರಿಸಿ ಶುಭಾಶಂಸನೆಗೈದರು. ರೋಟರಿಯನ್ ಗುರುಪ್ರಸಾದ್ ಶೆಣೈ ಪ್ರಾರ್ಥನೆ ಹಾಡಿದರು. ರೋಟರಿಯನ್ ಮಹೇಂದ್ರ ಕಾರ್ತಿಕ್ ಸ್ವಾಗತಿಸಿ, ರೋಟರಿ ಬದಿಯಡ್ಕದ ಕಾರ್ಯದರ್ಶಿ ವೈ. ರಾಘವೇಂದ್ರ ಪ್ರಸಾದ್ ನಾಯಕ್ ಪ್ರಶಸ್ತಿ ಪುರಸ್ಕø್ಕತರು ಸಮಾಜಕ್ಕೆ ಸಲ್ಲಿಸಿದ ಸೇವಾ ಕಾಯ9ಗಳನ್ನು ಸ್ಮರಿಸಿ ವಂದಿಸಿದರು. ವೇದಿಕೆಯಲ್ಲಿ ರೋಟರಿ ಖಜಾಂಜಿ ಕೇಶವ ಬಿ ಉಪಸ್ಥಿತರಿದ್ದರು.