ಇಡುಕ್ಕಿ: ವಿದ್ಯಾರ್ಥಿಗಳನ್ನು ಸೀಟಿನಿಂದ ಎದ್ದು ಬರುವಂತೆ ಹೇಳಿದ ಕಂಡಕ್ಟರ್‍ಗೆ ಪೋಲೀಸರು ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಇಡುಕ್ಕಿ-ತೊಡುಪುಳ-ಮೂಲಮಟ್ಟಂ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ಸಿನ ಕಂಡಕ್ಟರ್ ವಿರುದ್ಧ ಪೋಲೀಸ್ ಕ್ರಮ ಕೈಗೊಳ್ಳುವ ಎಚ್ಚರಿ ನೀಡಿರುವರು.
ನಿನ್ನೆ ಘಟನೆ ನಡೆದಿದೆ. ತೊಡುಪುಳದಿಂದ ಹೊರಟಿದ್ದ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಕಂಡಕ್ಟರ್ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಬಾರದು ಎಂದು ಮಕ್ಕಳ ಹಕ್ಕು ಆಯೋಗದ ಆದೇಶದ ನಡುವೆಯೂ ಕಂಡಕ್ಟರ್‍ನ ಈ ಕ್ರಮ ಪ್ರಶ್ನೆಗೆ ಕಾರಣವಾಯಿತು. ಮುತ್ತಂ ಮೂಲದ ಸುನೀಲಕುಮಾರ್ ಪೋಲೀಸರಿಗೆ ದೂರು ನೀಡಿದ್ದರು.
ಬಳಿಕ ಮುತ್ತಂ ಪೋಲೀಸರು ತುμÁರಾಮ್ ಎಂಬ ಖಾಸಗೀ ಬಸ್ಸಿನ ಕಂಡಕ್ಟರ್‍ನನ್ನು ಠಾಣೆಗೆ ಕರೆಸಿ ಕಾನೂನು ಅಂಶಗಳನ್ನು ವಿವರಿಸಿದರು. ಇದೇ ರೀತಿಯ ಘಟನೆಗಳು ಮರುಕಳಿಸಿದರೆ ಬಸ್‍ನ ಪರ್ಮಿಟ್ ರದ್ದು ಮಾಡುವಂತೆ ಮೋಟಾರು ವಾಹನ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕಂಡಕ್ಟರ್ ಬರೆದುಕೊಟ್ಟ ನಂತರ ದೂರು ಇತ್ಯರ್ಥವಾಯಿತು.