ಕುಂಬಳೆ: ಸಾಹಿತ್ಯ, ಸಾಂಸ್ಕೃತಿಕ ಮಾಸ ಪತ್ರಿಕೆ 'ಪೊಸಡಿ ಗುಂಪೆ' ಯ ಸಂಪಾದಕ ಜಾನ್ ಡಿಸೋಜ(60) ನಿನ್ನೆ ಸಂಜೆಯಿಂದ ಹಠಾತ್ ನಾಪತ್ತೆಯಾಗಿರುವುದಾಗಿ ಕುಟುಂಬ ಮೂಲಗಳು ದೂರು ನೀಡಿವೆ.
ನಿನ್ನೆ ಸಂಜೆ 7 ಗಂಟೆಯ ಸುಮಾರಿಗೆ ಮನೆಮಂದಿಯೊಂದಿಗೆ ಮಾತನಾಡಿದ್ದು ಬಳಿಕ ನಾಪತ್ತೆಯಾಗಿರುವರು. ಅವರು ಬಳಸುವ ಸ್ಕೂಟರ್ ನಯಾಬಝಾರ್ ಸಮೀಪದ ಅಂಬಾರ್ ಚೆರುಗೋಳಿ ಪರಿಸರದಲ್ಲಿ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಪೆರ್ಮುದೆ ಸಮೀಪದ ಧರ್ಮತ್ತಡ್ಕ ನಿವಾಸಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಪೊಸಡಿಗುಂಪೆ ಸಾಹಿತ್ಯ ಪತ್ರಿಕೆಯ ಮೂಲಕ ನಾಡಿನೆಲ್ಲೆಡೆ ಪರಿಚಿತರಾಗಿದ್ದಾರೆ.
ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿದ್ದು ತನಿಖೆಗೆ ಚಾಲನೆ ನೀಡಲಾಗಿದೆ. ಬೂದುಬಣ್ಣದ ಪ್ಯಾಂಟ್, ಮೆರೂನ್ ಟೀ ಶರ್ಟ್ ಧರಿಸಿದ್ದ ಅವರ ಜಾಡು ಪತ್ತೆಯಾದಲ್ಲಿ ಮಂಜೇಶ್ವರ ಪೋಲೀಸ್ ಠಾಣೆ ಅಥವಾ ನಿಮ್ಮ ಪರಿಸರದ ಠಾಣೆಗೆ ಮಾಹಿತಿ ನೀಡಲು ವಿನಂತಿಸಲಾಗಿದೆ.