ಬದಿಯಡ್ಕ: ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಶನಿವಾರ ಜರಗಿತು. ಶಾಲಾ ಪ್ರಬಂಧಕÀ ವೈ. ಶ್ರೀಧರ ಭಟ್ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೆÇಸವಳಿಗೆ ಮಾತನಾಡಿ, ಗ್ರಾಮೀಣ ಪ್ರದೇಶವಾದ ಇಲ್ಲಿಯ ಶಿಕ್ಷಣ ಕೈಂಕರ್ಯ ವಿಶಿಷ್ಠವಾದುದು. ಲಭ್ಯ ಸಂಪನ್ಮೂಲಗಳ ಮಿತಿಯೊಳಗೆ ಸಾಮಾನ್ಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಉನ್ನತೀಕರಿಸಲು ನಡೆಸುತ್ತಿರುವ ಈ ಅಕ್ಷರ ಸೇವೆ ಸ್ತುತ್ಯರ್ಹ. ಇಂತಹ ಕಾರ್ಯಕ್ರಮಗಳು ಮಕ್ಕಳ ಬೆಳವಣಿಗೆಗೆ ಸೋಪಾನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸ್ವರ್ಗದ ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ. ಸುಬ್ರಹ್ಮಣ್ಯ ಭಟ್ ಮಾತನಾಡಿ, ಅಮ್ಮಂದಿರ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಪರಿಸರದಿಂದ ಸಂಸ್ಕøತಿ ಹಾಗೂ ಪರಂಪರೆಯ ಅರಿವು ಉಂಟಾದರೆ ಭಾರತ ವಿಶ್ವಗುರು ಆಗುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ದತ್ತಿನಿಧಿ ಬಹುಮಾನ ಹಾಗೂ ಸಾಹಿತ್ಯಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಂಬ್ಡಾಜೆ ಪಂಚಾಯತಿ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತ, ಸ್ಥಳೀಯ ಜನಪ್ರತಿನಿಧಿ ಕೃಷ್ಣ ಶರ್ಮ ಜಿ. ಶುಭಹಾರೈಸಿದರು. ದೃಶಾ ಕೆ. ಹಾಗೂ ಲಕ್ಷ್ಮಿತಾ ಎಚ್.ಎಸ್. ಪ್ರಾರ್ಥಿಸಿ, ಶಾಲಾ ಪ್ರಬಂಧಕ ವೈ ಶ್ರೀಧರ ಭಟ್ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಕೆ. ವರದಿವಾಚಿಸಿದರು. ಅಧ್ಯಾಪಕ ರಾಜಾರಾಮ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಿಕೆ ಅನಘಾ ಕೆ. ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಈಶ್ವರ ಮೂಲ್ಯ ಕಟ್ಟದಮೂಲೆ, ಮಾತೃ ಸಂಘದ ಅಧ್ಯಕ್ಷೆ ಶರ್ಮಿಳಾ ಈಳಂತೋಡಿ, ಎಸ್. ಎಸ್. ಜಿ. ಅಧ್ಯಕ್ಷ ಬಾಲಕೃಷ್ಣ ಕೆ. ಕೆ. ಕುಂಡಾಪು ಉಪಸ್ಥಿತರಿದ್ದರು. ಮುರಳೀ ಮಾಧವ ಪೆರಿಂಜೆ ಶಿಷ್ಯಂದಿರಾದ ಏತಡ್ಕ ಶಾಖಾ ವಿದ್ಯಾರ್ಥಿಗಳಿಂದ ಸಂಗೀತ, ಶಾಲಾ ಮಕ್ಕಳಿಂದ ವೈವಿಧ್ಯಮಯ ಶಾಸ್ತ್ರೀಯ ಜಾನಪದ ನೃತ್ಯ, ನಾಟಕ, ಮೈಮ್ ಶೋ ನೃತ್ಯ ರೂಪಕಗಳ ಪ್ರದರ್ಶನ ನಡೆಯಿತು. ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ ಪೆರ್ಲ ಇಲ್ಲಿನ ಏತಡ್ಕ ಶಾಖಾ ವಿದ್ಯಾರ್ಥಿಗಳ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.