ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನಡೆಸಿದ ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಕೇರಳದ ರಾಜ್ಯಪಾಲರು ನೀಡುವ ರಾಜ್ಯಪುರಸ್ಕಾರಕ್ಕೆ ಶಿವಾನಿ ಕೂಡ್ಲು ಆಯ್ಕೆಯಾಗಿದ್ದಾಳೆ. ಈಕೆ ಇರಿಯಣ್ಣಿಯ ಶ್ರೀಕುಮರಿ ಅನೆಕಲ್ಲು ಇವರ ಗಂಗಾ ಓಪನ್ ಗೈಡ್ ಯೂನಿಟ್‍ನ ಸದಸ್ಯೆ ಹಾಗೂ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.