ತಿರುವನಂತಪುರಂ: ಮೋಟಾರು ವಾಹನ ಇಲಾಖೆಯಿಂದ ಸೇವೆಗಳಿಗೆ ಪಾರದರ್ಶಕ ಮತ್ತು ತ್ವರಿತ ಪ್ರವೇಶಕ್ಕಾಗಿ ವಾಹನದ ಡೇಟಾಬೇಸ್‍ನಲ್ಲಿ ವಾಹನ ಮಾಲೀಕರ ಆಧಾರ್-ಸಂಯೋಜಿತ ಮೊಬೈಲ್ ಸಂಖ್ಯೆಗಳನ್ನು ಸೇರಿಸಲು ಸಾರಿಗೆ ಆಯುಕ್ತರು ಸೂಚಿಸಿದ್ದಾರೆ.
ವಾಹನ ಮಾಲೀಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ನವೀಕರಿಸಬಹುದು. ಇದಕ್ಕಾಗಿ ಪರಿವಾಹನ್ ವೆಬ್‍ಸೈಟ್‍ನಲ್ಲಿ ಸೌಲಭ್ಯವನ್ನು ಸೇರಿಸಲಾಗಿದೆ.
ಇದು ಸಾಧ್ಯವಾಗದಿದ್ದಲ್ಲಿ ಮಾತ್ರ ನೋಂದಣಿ ಪ್ರಾಧಿಕಾರವನ್ನು ಸಂಪರ್ಕಿಸುವ ಮೂಲಕ ಮೊಬೈಲ್ ನವೀಕರಣವನ್ನು ಪೂರ್ಣಗೊಳಿಸಬಹುದು. ವಾಹನ ಮಾಲೀಕರು ಈ ಸೌಲಭ್ಯವನ್ನು ಗರಿಷ್ಠ ಸದುಪಯೋಗಪಡಿಸಿಕೊಂಡು ನ.29ರೊಳಗೆ ಮೊಬೈಲ್ ಅಪ್ ಡೇಟ್ ಪೂರ್ಣಗೊಳಿಸಬೇಕು ಎಂದು ಆಯುಕ್ತರು ಮಾಹಿತಿ ನೀಡಿದರು.