ಕಾಸರಗೋಡು: ಕಾಸರಗೋಡಿನಲ್ಲಿ ನಕಲಿ ಸೀಲ್ ಗಳೊಂದಿಗೆ ವಂಚನೆ ತಂಡವನ್ನು ಬಂಧಿಸಲಾಗಿದೆ. ಇವರಿಂದ ವಿವಿಧ ಬ್ಯಾಂಕ್, ಕಾಲೇಜು, ಆಸ್ಪತ್ರೆಗಳ ನಕಲಿ ಸೀಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಂಎ ಅಹ್ಮದ್ ಅಬ್ರಾರ್, ತ್ರಿಕರಿಪುರದ ಎಂಎ ಸಾಬಿತ್ ಮತ್ತು ಪಟನ್ನಕ್ಕಾಡ್‍ನ ಮುಹಮ್ಮದ್ ಸಫ್ ವಾನ್ ಅವರನ್ನು ಪೋಲೀಸರು ಬಂಧಿಸಿದ್ದಾರೆ.
ಕೇರಳ-ಕರ್ನಾಟಕ ಗಡಿ ಸಮೀಪದ ಕಣ್ಣಡಿತೋಡ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಬೇಡಗಂ ಪೋಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಅವರಿಂದ 37 ನಕಲಿ ಸೀಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರೂ ನಕಲಿ ಸರ್ಟಿಫಿಕೇಟ್ ತಯಾರಿಸಿ ಜನರನ್ನು ವಿದೇಶಕ್ಕೆ ಸಾಗಿಸುವ ಗುಂಪು ಎಂಬುದು ಪ್ರಾಥಮಿಕ ತೀರ್ಮಾನ.
ಕೆನರಾ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ನ ವಿವಿಧ ಶಾಖೆಗಳ ಹೆಸರಿನಲ್ಲಿ ನಕಲಿ ಸೀಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಂದ ಎಂಇಎಸ್ ಕಾಲೇಜು ಮತ್ತು ಶರಫ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರ ಹೆಸರಿನ ಸೀಲ್ ಹಾಗೂ ರೌಂಡ್ ಸೀಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡು ವಿವರವಾದ ತನಿಖೆ ಆರಂಭಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.