HEALTH TIPS

ಅರ್ಜಿ ಸಲ್ಲಿಕೆಗೆ ನಿಯಮ ರೂಪಿಸಿ: ಸಿಬಲ್

             ವದೆಹಲಿ (PTI): ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಬೇಕಿತ್ತು ಎಂದು ಹೇಳಿದ ಹಿರಿಯ ವಕೀಲ ಕಪಿಲ್ ಸಿಬಲ್, 'ಜನರು ಸುಪ್ರೀಂ ಕೋರ್ಟ್‌ ಮೊರೆಹೋಗಬೇಕಿರುವುದು ಯಾವಾಗ ಎಂಬ ಬಗ್ಗೆ ನಿಯಮವನ್ನು ರೂಪಿಸಬೇಕು' ಎಂದು ಆಗ್ರಹಿಸಿದರು.

               ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಯಾರೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಯಸುತ್ತಿಲ್ಲ. ಕೇಂದ್ರಕ್ಕೆ 'ಡಬಲ್ ಎಂಜಿನ್' ಸರ್ಕಾರ ಮಾತ್ರವೇ ಬೇಕಾಗಿದೆ. ಹೀಗಾಗಿ ಸೊರೇನ್ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಸಿಬಲ್ ಆರೋಪಿಸಿದರು.

               ತಮ್ಮನ್ನು ಬಂಧಿಸಿದ ಇ.ಡಿ. ಕ್ರಮ ಪ್ರಶ್ನಿಸಿ ಸೊರೇನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಂಧನದ ವಿಚಾರವಾಗಿ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌ ಮೊರೆಹೋಗುವಂತೆ ಶುಕ್ರವಾರ ಸೂಚಿಸಿತ್ತು. ಸೊರೇನ್ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂ.ಎಂ. ಸುಂದರೇಶ್, ಬೇಲಾ ಎಂ. ತ್ರಿವೇದಿ ಅವರು ಇದ್ದ ಪೀಠದ ಎದುರು ವಿಚಾರಣೆಗೆ ಬಂದಿತ್ತು. ವಕೀಲರಾದ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಅವರು ಸೊರೇನ್ ‍ಪರವಾಗಿ ಹಾಜರಾಗಿದ್ದರು.

            'ನಾವು ಯಾವ ಪ್ರಕರಣಗಳಲ್ಲಿ ಇಲ್ಲಿಗೆ (ಸುಪ್ರೀಂ ಕೋರ್ಟ್‌ಗೆ) ಬರಬೇಕು, ಯಾವ ಪ್ರಕರಣದಲ್ಲಿ ಬರಬಾರದು ಎಂಬುದನ್ನು ಕೋರ್ಟ್‌ ನಮಗೆ ಹೇಳಬೇಕು. ನಮ್ಮ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ತೆಗೆದುಕೊಳ್ಳುತ್ತದೆಯೇ ಇಲ್ಲವೇ ಎಂಬುದು ನಮಗೆ ಗೊತ್ತಿಲ್ಲ; ಆದರೆ ನಮಗೆ ಇತಿಹಾಸ ಗೊತ್ತಿದೆ' ಎಂದು ಸಿಬಲ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

                ಮೂಲಭೂತ ಹಕ್ಕುಗಳನ್ನು ನಿರಾಕರಿಸಿದ ಸಂದರ್ಭಗಳಲ್ಲಿ ಪ್ರಜೆಗಳು ಸುಪ್ರೀಂ ಕೋರ್ಟ್‌ ಮೊರೆಹೋಗಲು ಅವಕಾಶ ಇದೆ ಎಂದು ಸಂವಿಧಾನದ 32ನೆಯ ವಿಧಿ ಹೇಳುತ್ತದೆ. 'ಹಲವು ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ, ಅರ್ಜಿದಾರರಿಗೆ ಈ ವಿಧಿಯ ಅಡಿಯಲ್ಲಿ ನ್ಯಾಯ ಒದಗಿಸಿದೆ' ಎಂದು ಸಿಬಲ್ ಅವರು ಹೇಳಿದರು.

            'ದೇಶದಲ್ಲಿ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿದ ಇಂತಹ ನಿದರ್ಶನಗಳು ಇಲ್ಲವೇ ಇಲ್ಲ ಎಂಬುದು ನನ್ನ ಅನಿಸಿಕೆ. ಸಂವಿಧಾನದ 32ನೆಯ ವಿಧಿಯ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೂಡ ನಡೆಯಲಿಲ್ಲ. ಸುಪ್ರೀಂ ಕೋರ್ಟ್ ನಮ್ಮ ಅರ್ಜಿಯ ವಿಚಾರಣೆ ನಡೆಸಿ, ನಂತರ ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಿದ್ದರೆ ಪರಿಸ್ಥಿತಿ ಬೇರೆಯದಾಗಿರುತ್ತಿತ್ತು. ಆದರೆ ನಮ್ಮ ಅರ್ಜಿಯನ್ನು ವಿಚಾರಣೆಗೇ ಎತ್ತಿಕೊಳ್ಳಲಿಲ್ಲ' ಎಂದು ಅವರು ಹೇಳಿದರು.

            ಕೇಂದ್ರಕ್ಕೆ ವಿರೋಧ ಪಕ್ಷಗಳು ಬೇಕಿಲ್ಲ, ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಮುಖ್ಯಮಂತ್ರಿಗಳು ಬೇಕಿಲ್ಲ ಎಂದು ಸಿಬಲ್ ಹೇಳಿದರು. 'ಇದನ್ನು ಅವರು ಕೇಜ್ರಿವಾಲ್‌ (ದೆಹಲಿ ಮುಖ್ಯಮಂತ್ರಿ) ಅವರಿಗೂ ಮಾಡುತ್ತಾರೆ' ಎಂದು ಎಚ್ಚರಿಸಿದರು.

              'ಇನ್ನು ಸೊರೇನ್ ವಿರುದ್ಧ ಹತ್ತು ಸುಳ್ಳು ಪ್ರಕರಣ ದಾಖಲಿಸಲಾಗುತ್ತದೆ. ಆಗ ಸೊರೇನ್ ಅವರಿಗೆ ಜೈಲಿನಿಂದ ಹೊರಬರಲು ಆಗುವುದಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಯೋಜನ ಆಗುತ್ತದೆ' ಎಂದು ಸಿಬಲ್ ಹೇಳಿದರು. 'ನಮ್ಮ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಆಲಿಸುವುದಿಲ್ಲ ಎಂದಾದರೆ ನಾವು ಎಲ್ಲಿಗೆ ಹೋಗಬೇಕು' ಎಂದು ಪ್ರಶ್ನಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries