ಪೆರ್ಲ: ಕರ್ನಾಟಕ ಮೂಲದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಡಬದ ತಂಡವೊಂದು ಆಶಕ್ತರ ಹೆಸರಿನಲ್ಲಿ ಪೇಟೆ, ಜಾತ್ರೆ ಜನ ಜಂಗುಳಿ ಕೇಂದ್ರೀಕರಿಸಿ ನಕಲಿ ಕೂಪನ್ ಮೂಲಕ ದೇಣಿಗೆ ಸಂಗ್ರಹಿಸುವ ತಂಡವೊಂದನ್ನು ಪೆರ್ಲ ಪೇಟೆಯಲ್ಲಿ ನಾಗರಿಕರು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆರಂಭದಲ್ಲಿ ಹರೀಶ ಎಂಬ ಹೆಸರು ಸೂಚಿಸಿದ ಈತನ ಪೂರ್ವಾಪರ ದಾಖಲೆ ಪರಿಶೀಲಿಸಿದಾಗ ಹಾರೀಸ್ ಎಂದು ಪತ್ತೆಯಾಯಿತು. ಬಳಿಕ ಇನ್ನೊರ್ವನನ್ನು ವಿಚಾರಿಸಿದಾಗ ಈತನೂ ಅನ್ಯ ಮತೀಯಯನೆಂದು ತಿಳಿದು ಬಂದಿದ್ದು,ಮತ್ತೋರ್ವ ಈ ತಂಡದಲ್ಲಿದ್ದು, ದಿನಕೂಲಿ ಆಧಾರದಲ್ಲಿ ಕೆಲಸ ಮಾಡಲು ಇವರೊಂದಿಗೆ ಸೇರಿಕೊಂಡಿದ್ದ ಎನ್ನಲಾಗಿದೆ. ಇವರು ಸಂಚರಿಸುತ್ತಿದ್ದ ವಾಹನ ಪರಿಶೋಧಿಸಿದಾಗ ದಾಖಲೆ ಇನ್ಯಾರೊದೊ ಹೆಸರಿನಲ್ಲಿದ್ದು ವಾಹನಕ್ಕೆ ಭಗವತಿ - ಸಂಚಾರಿ ಗುಳಿಗ ಎಂಬ ಸ್ಟಿಕರ್ ಅಂಟಿಸಿ ಹಿಂದೂ ಸಂಘಟನೆ ಎಂದು ಬಿಂಬಿಸುವಂತೆ ತೆರಳಿ ನಾಗರಿಕರಿಂದ ಹಣ ಸಂಗ್ರಹಿಸುತ್ತಿದ್ದರು. ಈ ಬಗ್ಗೆ ಬದಿಯಡ್ಕ ಠಾಣಾ ಪೋಲಿಸರು ಸ್ಥಳಕ್ಕಾಗಮಿಸಿ ತಂಡವನ್ನು ಬಂಧಿಸಿದ್ದಾರೆ.