ಕುಂಬಳೆ: ನಮ್ಮ ನಿತ್ಯಜೀವನ ಶೈಲಿಯಿಂದಾಗಿ ಮಕ್ಕಳಲ್ಲಿಯೂ ಉಂಟಾಗುವ ಸಕ್ಕರೆಖಾಯಿಲೆ ಮೊದಲಾದ ರೋಗಗಳ ಹತೋಟಿ ತರಬೇಕೆನ್ನುವ ಜಾಗೃತಿ ಸಂದೇಶದೊಂದಿಗೆ ಲಯನ್ಸ್ ಇಂಟರ್ ನ್ಯಾಶನಲ್ ಡಿಸ್ಟ್ರಿಕ್ಟ್ 318 ಇ ನೇತೃತ್ವದಲ್ಲಿ ಸಂಗೀತ ಯಾತ್ರೆ ಕಾಸರಗೋಡಿನಲ್ಲಿ ಆರಂಭಿಸಲಾಯಿತು. ಬೆಳಗ್ಗೆ ನಗರಸಭಾ ಕ್ರೀಡಾಂಗಣದಿಂದ ಆರಂಭಗೊಂಡ ಯಾತ್ರೆ ವಿವಿಧ ಕೇಂದ್ರಗಳಲ್ಲಿ ಸಂಚರಿಸಿ, ಭಾನುವಾರ ಕೋಝಿಕ್ಕೋಡು ಬೀಚ್‍ನಲ್ಲಿ ಸಮಾಪನಗೊಂಡಿತು.
ಪ್ರಸಿದ್ಧ ಸಂಗೀತಗಾರ ವೆಳ್ಳಿಕೋತ್ ವಿಷ್ಣು ಭಟ್ ಹಾಗೂ ತಂಡದವರಿಂದ ರೋಗಹತೋಟಿಗೆ ತರುವ ಸಂದೇಶದೊಂದಿಗೆ ಸಂಗೀತ ಗಾಯನ ನಡೆಯಿತು. ಲಯನ್ಸ್ ಗವರ್ನರ್ ಟಿ.ಕೆ.ರಜೀಶ್, ಜಾಥಾ ನಾಯಕ ಕ್ಯಾಪ್ಟನ್ ವಿ.ವೇಣುಗೋಪಾಲನ್, ಲಯನ್ಸ್ ಕಾರ್ಯದರ್ಶಿ ಶ್ರೀನಿವಾಸ ಪೈ, ಕೆ.ವಿನೋದ್ ಕುಮಾರ್, ಪ್ರಕಾಶನ್ ಕಾಣಿ, ಕೆ.ಪ್ರೇಂ ಕುಮಾರ್ ಮೊದಲಾದ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ವಿವಿಧ ಜಿಲ್ಲೆಗಳಲ್ಲಿ ಲಯನ್ಸ್ ಕ್ಲಬ್‍ಗಳು ವಿವಿಧ ಪ್ರದೇಶಗಳಲ್ಲಿ ಸ್ವಾಗತವನ್ನು ನೀಡಿದರು. ಸಹಗಾಯನದಲ್ಲಿ ವಿದ್ವಾನ್ ವಸಂತ ಕುಮಾರ್ ಗೋಸಾಡ, ಮಡಿಕೈ ಉಣ್ಣಿಕೃಷ್ಣನ್ ನಂಬೂದಿರಿ ರಿಥಂಪ್ಯಾಡ್, ಲಾಲ್ ಮಹೇಶ್ ತೃಕ್ಕರಿಪ್ಪುರ ತಬಲಾ ಹಾಗೂ ಕೀಬೋರ್ಡ್‍ನಲ್ಲಿ ತರಂಗ್ ದಾಮೋದರನ್ ಪ್ಲಾಚ್ಚಿಕ್ಕರ ಜೊತೆಗೂಡಿದರು.