ತಿರುವನಂತಪುರಂ: ರಾಜ್ಯ ಸಾಲದ ಸುಳಿಯಲ್ಲಿ ಮುಳುಗುತ್ತಿದ್ದರೂ ಕೇರಳ ಸರ್ಕಾರ ಕೆ-ರೈಲ್ ಯೋಜನೆಯನ್ನು ಕೈ ಬಿಟ್ಟಿಲ್ಲ.
ಯೋಜನೆ ಕೈಬಿಟ್ಟಿಲ್ಲ ಎಂದು ಹಣಕಾಸು ಸಚಿವ ಕೆ. ಎನ್ ಬಾಲಗೋಪಾಲ್ ಮಾಹಿತಿ ನೀಡಿದರು. ಸಿಲ್ವರ್ ಲೈನ್ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ಮುಂದುವರಿಸಲಾಗುವುದು ಎಂದು ಅವರು ಹೇಳಿದರು. ಎರಡನೇ ಪಿಣರಾಯಿ ಸರ್ಕಾರದ ಇಂದು ಮಂಡಿಸಿದ ನಾಲ್ಕನೇ ಬಜೆಟ್ ಸಂದರ್ಭ ವಿತ್ತ ಸಚಿವರು ಈ ವಿಷಯಗಳನ್ನು ಪ್ರಕಟಿಸಿದರು.
ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಕೇಂದ್ರ ಸರ್ಕಾರವನ್ನು ದೂಷಿಸುವ ಮೂಲಕ ಹಣಕಾಸು ಸಚಿವರು ರಾಜ್ಯ ಬಜೆಟ್ 2024-25 ಅನ್ನು ಪ್ರಾರಂಭಿಸಿದರು. ಕೇರಳದಲ್ಲಿ ಕೆ-ರೈಲ್ ಅನುಷ್ಠಾನದಿಂದ ಪರಿಸರ ಸಮಸ್ಯೆಗಳು ಮತ್ತು ಜನರ ಬಿಕ್ಕಟ್ಟುಗಳ ಬಗ್ಗೆ ತಜ್ಞರು ಅಂದಾಜುಗಳನ್ನು ಒದಗಿಸಿದ್ದರೂ ಕೇಂದ್ರವು ಕೇರಳದ ರೈಲ್ವೆ ಅಭಿವೃದ್ಧಿಯನ್ನು ಪರಿಗಣಿಸುತ್ತಿಲ್ಲ ಎಂದು ಹಣಕಾಸು ಸಚಿವರು ವಾದಿಸಿದರು. ವಂದೇ ಭಾರತ್ ಯಶಸ್ಸು ಸಿಲ್ವರ್ ರೈಲಿನ ಪ್ರಸ್ತುತತೆಯನ್ನು ಹೆಚ್ಚಿಸಿದೆ ಎಂದು ಅವರು ಬಜೆಟ್‍ನಲ್ಲಿ ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ದುಂದುವೆಚ್ಚದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಬಜೆಟ್ ನಲ್ಲಿ ವಿವರಿಸಿದ ಅವರು, ಯುದ್ಧ ಹಾಗೂ ಜಾಗತಿಕ ಆರ್ಥಿಕ ಹಿಂಜರಿತ ಕೇರಳವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳುತ್ತಿದೆ ಎಂದಿರುವರು.