ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಟಾಣಿ ಮಕ್ಕಳ ದಿನಚರಿಯನ್ನೊಳಗೊಂಡ ‘ಅಕ್ಷರ ಮುತ್ತು’ ಸಂಯುಕ್ತ ದಿನಚರಿ ಹಸ್ತ ಪ್ರತಿಯನ್ನು ಮಂಜೇಶ್ವರ ಬಿ.ಆರ್.ಸಿಯ ಮಸ್ಟರ್ ಕೋರ್ಡಿನೇಟರ್ ತಿಲಕ ಟೀಚರ್ ಬಿಡುಗಡೆಗೊಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ವೈ ರಾವ್ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಫಾತಿಮತ್ತ್ ಫಸೀನ ವಿದ್ಯಾರ್ಥಿಗಳ ಸಂಯುಕ್ತ ದಿನಚರಿಯ ಮಹತ್ವ ತಿಳಿಸಿದರು. ಶಿಕ್ಷಕಿ ಅಬ್ಸ ಸ್ವಾಗತಿಸಿ, ಶಿಕ್ಷಕ ಇಸ್ಮಾಯಿಲ್ ಯಂ ವಂದಿಸಿದರು.