ನವದೆಹಲಿ: ತನ್ನ ನೂತನ ಸರ್ವೇಕ್ಷಣಾ ನೌಕೆ 'ಸಂಧಾಯಕ್' ಕಾರ್ಯಾಚರಣೆಗೆ ಶೀಘ್ರದಲ್ಲೇ ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯು ಚಾಲನೆ ನೀಡಲಿದೆ ಎಂದು ನೌಕಾಪಡೆ ಮುಖ್ಯಸ್ಥರು ತಿಳಿಸಿದ್ದಾರೆ.
ನವದೆಹಲಿ: ತನ್ನ ನೂತನ ಸರ್ವೇಕ್ಷಣಾ ನೌಕೆ 'ಸಂಧಾಯಕ್' ಕಾರ್ಯಾಚರಣೆಗೆ ಶೀಘ್ರದಲ್ಲೇ ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯು ಚಾಲನೆ ನೀಡಲಿದೆ ಎಂದು ನೌಕಾಪಡೆ ಮುಖ್ಯಸ್ಥರು ತಿಳಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ ಸಿಂಗ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.
ಕೋಲ್ಕತ್ತದ ಎಂ/ಎಸ್ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆಯಂಡ್ ಎಂಜಿನಿಯರ್ಸ್ (ಜಿಆರ್‌ಎಸ್‌ಇ) ಅವರು ನೌಕಾಪಡೆಗಾಗಿ ನಾಲ್ಕು ಸರ್ವೇಕ್ಷಣಾ ನೌಕೆಗಳನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲಿ ನೌಕಾಪಡೆಗೆ ಸೇರ್ಪಡೆಯಾದ ಮೊದಲ ನೌಕೆ 'ಸಂಧಾಯಕ್'. ಇದನ್ನು ಡಿಸೆಂಬರ್ 4ರಂದು ಸಂಸ್ಥೆಯು ನೌಕಾಪಡೆಗೆ ಹಸ್ತಾಂತರಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಈ ನೌಕೆಗಳು ಬಂದರು, ಕರಾವಳಿ ತೀರ, ಹಡುಗು ಮಾರ್ಗ, ಸಮುದ್ರದ ಆಳದಲ್ಲಿ ಭದ್ರತಾ ಪರಿಶೀಲನೆ ನಡೆಸುತ್ತದೆ. ಅಲ್ಲದೇ, ನೌಕಾಪಡೆಯ ಹಲವು ಬಗೆಯ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆಯೂ ಈ ನೌಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ.