ಬದಿಯಡ್ಕ: ವೀಣಾವಾದಿನಿಯ 25ನೇ ವಾರ್ಷಿಕೋತ್ಸವ ವೇದ ನಾದ ಯೋಗ ತರಂಗಿಣಿಯ ಸಮಾರೋಪ, ವೀಣಾವಾದಿನಿ ಪುರಸ್ಕಾರ 2024 ಕಾರ್ಯಕ್ರಮ ಭಾನುವಾರ ಜರಗಲಿರುವುದು. ಬೆಳಗ್ಗೆ 6.15ಕ್ಕೆ ಇಶಾ ಹಠಯೋಗ ಅಧ್ಯಾಪಕ ಪ್ರವೀಣ್ ಕುಮಾರ್ ಅವರಿಂದ ಹಠಯೋಗ, 9 ಗಂಟೆಗೆ ವೀಣಾವಾದಿನಿ ತಂಡದಿಂದ ಪಂಚರತ್ನ ಕೃತಿ ಆಲಾಪನೆ, 10.30ಕ್ಕೆ ನಾದೋಪಾಸನಾ, 3 ಗಂಟೆಗೆ ಡಾ. ಬಾಲಮುರಳಿಕೃಷ್ಣ ಅವರ ಗೌರವಾರ್ಥ ಮುರಲೀರವಮ್ ಕಾರ್ಯಕ್ರಮ, 4 ಗಂಟೆಗೆ ವೀಣಾವಾದಿನಿ ಪುರಸ್ಕಾರ 2024 ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಎಡನೀರು ಆಶೀರ್ವಚನ ನೀಡಲಿದ್ದಾರೆ. ಮೃದಂಗ ವಿದ್ವಾನ್ ಚೇರ್ತಲ ಜಿ.ಕೃಷ್ಣಕುಮಾರ್ ಅವರಿಗೆ ಪುರಸ್ಕಾರ ನೀಡಲಾಗುವುದು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ, ರೇವತಿ ಕಾಮತ್ ಬೆಂಗಳೂರು, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸಿ.ಎ.ಸುೀರ್ ಕುಮಾರ್ ಶೆಟ್ಟಿ ಎಣ್ಮಕಜೆ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ಬ್ರಹ್ಮಶ್ರೀ ರಾಧಾಕೃಷ್ಣ ಭಟ್ ಬಳ್ಳಪದವು ಉಪಸ್ಥಿತರಿರುವರು. ಸಂಜೆ 4 ಗಂಟೆಗೆ ವಿದ್ವಾನ್ ಎಂ.ಕೆ.ಶಂಕರನ್ ನಂಬೂದಿರಿ ಪ್ರಧಾನ ಕಛೇರಿ ನಡೆಸಿಕೊಡಲಿರುವರು. ವಯಲಿನ್‍ನಲ್ಲಿ ಮಂಜೂರು ರಂಜಿತ್, ಮೃದಂಗದಲ್ಲಿ ಚೇರ್ತಲ ಜಿ.ಕೃಷ್ಣಕುಮಾರ್, ಘಟಂನಲ್ಲಿ ಉಡುಪಿ ಶ್ರೀಧರ್, ಮೋರ್ಸಿಂಗ್‍ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಜೊತೆಗೂಡಲಿರುವರು.