ಕಾಸರಗೋಡು: ನಗರಸಭೆ ಹಾಗೂ ಆಸುಪಾಸಿನ ವಿವಿಧ ಪಂಚಾಯಿತಿ ವ್ಯಾಪ್ತಿಯ ಒಂದುವರೆ ಲಕ್ಷದಷ್ಟು ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಾವಿಕೆರೆ ರೆಗ್ಯುಲೇಟರ್‍ನಲ್ಲಿ ನೀರಿನ ಒಳಹರಿವಿನಲ್ಲಿ ಗಣನೀಯ ಕುಸಿತ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಕ್ಷಾಮ ತಲೆದೋರುವ ಭೀತಿ ಎದುರಾಗಿದೆ.
ಬಾವಿಕೆರೆ ಅಣೆಕಟ್ಟೆಯಿಂದ ಪಂಪಿಂಗ್ ನಡೆಸಿ, ವಿದ್ಯಾನಗರದ ಸುದ್ಧೀಕರಣ ಘಟಕಕ್ಕೆ ಸಾಗಿಸಿ ಅಲ್ಲಿಂದ ಕಾಸರಗೋಡು ನಗರಸಭೆ, ಮುಳಿಯಾರು, ಚೆಂಗಳ, ಮಧೂರು, ಮೊಗ್ರಾಲ್‍ಪುತ್ತುರು, ಚೆಮ್ನಾಡ್ ಗ್ರಾಮ ಪಂಚಾಯಿತಿಯ ವಿವಿಧ ಕೇಂದ್ರಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಮುಳಿಯಾರುಮ ಬೇಡಡ್ಕ, ಪಳ್ಳಿಕೆರೆ ಪಂಚಾಯಿತಿ ವ್ಯಾಪ್ತಿಗೆ ಕ್ರಷಿ ಬಳಕೆಗಾಗಿಯೂ ನೀರು ವಿತರನೆಯಾಘುತ್ತಿದೆ. ಬಾವಿಕೆರೆಯಲ್ಲಿ ಈ ಹಿಂದೆ ಮರಳುಚೀಲದ ಅಣೆಕಟ್ಟು ನಿರ್ಮಿಸಿ ಕಾಸರಗೋಡಿಗೆ ಕುಡಿಯುವ ನೀರು ಪೂರ್ಯಕೆ ಮಾಡಲಾಗುತ್ತಿತ್ತು. ಈ ಸಂದರ್ಭ ಶುದ್ಧ ನೀರಿನೊಂದಿಗೆ ಉಪ್ಪು ನೀರು ಸೇರ್ಪಡೆಗೊಂಡು ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವುದನ್ನು ಮನಗಂಡ ಮೂರು ವರ್ಷದ ಹಿಂದೆ ಇಲ್ಲಿ ರೆಗ್ಯುಲೇಟರ್ ಕಮ್ ಅಣೆಕಟ್ಟು ನಿರ್ಮಿಸಲಾಗಿದೆ. ಪಯಸ್ವಿನಿ ಹಾಗೂ ಕರಿಚ್ಚೇರಿ ಹೊಳೆ ಸಂಗಮಿಸುವ ಈ ಪ್ರದೇಶದಲ್ಲಿ 120.4ಮೀ. ಅಡ್ಡಕ್ಕೆ ನಾಲ್ಕು ಮೀ. ಎತ್ತರದಲ್ಲಿ
35ಕೋಟಿ ರೂ. ವಎಚ್ಚದಲ್ಲಿ ರೆಗ್ಯುಲೇಟರ್ ಕಮ್ ಅಣೆಕಟ್ಟು ನಿಮಿಸಲಾಗಿದ್ದು, ಇದು ಭರ್ತಿಗೊಂಡಲ್ಲಿ 250ಕೋಟಿ ಲೀ. ನೀರು ಸಂಗ್ರಹಗೊಳ್ಳುತ್ತಿದೆ. ಕೇರಳ ಜಲ ಪ್ರಾಧಿಕಾರ ಮತ್ತು ಜಲ ಸಂಪನ್ಮೂಲ ಖಾತೆ ಆರ್ಥಿಕ ನೆರವಿನೊಂದಿಗೆ ಅನೆಕಟ್ಟು ನಿರ್ಮಿಸಲಾಗಿದೆ. ಕೃಷಿ ಹಗೂ ಕುಡಿಯುವ ನೀರಿಗಾಗಿ ಇದೇ ಅನೆಕಟ್ಟನ್ನು ಆಶ್ರಯಿಸುತ್ತಿದ್ದು, ನೀರಿನ ಒಳ ಹರಿವು ಕುಸಿತಗೊಂಡಿರುವುದು ನಾಗರಿಕರಲ್ಲಿ ಹಾಗೂ ಕೃಷಿಕರಲ್ಲಿ ಆತಂಕ ತಂದೊಡ್ಡಿದೆ. ಬೇಸಿಗೆ ಮಳೆ ಲಭಿಸಿದಲ್ಲಿ ಮಾತ್ರ ನೀರಿನ ಸಮಸ್ಯೆಗೆ ಒಂದಷ್ಟು ಪರಿಹಾರ ಲಭಿಸಲು ಸಾಧ್ಯವಾಗಲಿದೆ.