ಮುಳ್ಳೇರಿಯ: ಮನೆ, ಶಾಲೆಯ ವಾತಾವರಣವನ್ನು ಬಿಟ್ಟು ಒಂದೆರಡು ದಿನಗಳ ಹೊರಾಂಗಣ ಕಲಿಕೆಯಿಂದ ಮಕ್ಕಳು ಹಲವು ಅನುಭವಗಳನ್ನು ಪಡೆಯುತ್ತಾರೆ. ಇಂತಹ ಜೀವನಾನುಭವಗಳನ್ನು ಪಡೆಯಲು ಸ್ಕೌಟಿಂಗ್ ಪೂರಕವಾಗಿದೆ. ಸ್ಕೌಟಿಂಗ್, ಗೈಡಿಂಗ್ ನಿಂದ ಮಕ್ಕಳಿಗೆ ಸಿಗುವ ಇಂತಹ ಹೊರಾಂಗಣ ಕಲಿಕೆಯು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕಾರಣ ಎಂದು ಕುಂಬ್ಡಾಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ ಅಭಿಪ್ರಾಯ ಪಟ್ಟರು.
ಅಗಲ್ಪಾಡಿ ಶಾಲೆಯಲ್ಲಿ ಜರಗಿದ ಮೂರು ದಿನಗಳ ಪಟಲಾಂ ನಾಯಕರ ಶಿಬಿರದ ಸಮಾರೋಪ ಸಮಾರಂಭವನ್ನು ಉಧ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಅತ್ಯುತ್ತಮವಾಗಿ ಶಿಬಿರವನ್ನು ಆಯೋಜಿಸಿದ ಅಗಲ್ಪಾಡಿ ಶಾಲೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕುಂಬಳೆ ಉಪಜಿಲ್ಲಾ ಘಟಕವು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿತು.
ಶಿಬಿರದಲ್ಲಿ ಫ್ರೆಂಡ್ಸ್ ಶಿಪ್ ಗೇಂ, ಕಿಂ ಗೇಮ್, ವೈಡ್ ಗೇಂ, ಹೈಕಿಂಗ್, ಪ್ರಥಮ ಚಿಕಿತ್ಸೆ ಮೊದಲಾದ ವಿವಿಧ ಸ್ಕೌಟಿಂಗ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೆÇಸಳಿಕೆ ಶಿಬಿರವನ್ನು ಉಧ್ಘಾಟಿಸಿದರು. ಸ್ಕೌಟ್ಸ್ ಅಧ್ಯಾಪಕರಾಗಿ ನಿವೃತ್ತರಾದ ಗಣೇಶ್ ಕಾಮತ್, ಕಬ್ ಅಧ್ಯಾಪಕಿ ಫಿಲೋಮಿನಾ ರೋಡ್ರಿಗಸ್ ಹಾಗೂ ಮೆಡಲ್ ಆಫ್ ಮೆರಿಟ್ ಗೌರವಕ್ಕೆ ಪಾತ್ರರಾದ ಕಿರಣ್ ಪ್ರಸಾದ್ ಕೂಡ್ಲು ಅವರನ್ನು ಸನ್ಮಾನಿಸಲಾಯಿತು. ಸ್ಕೌಟ್ಸ್ ಮಕ್ಕಳಿಗೆ ಮನೆ ನಿರ್ಮಾಣ ಮಾಡಿಕೊಡುವ ಸ್ನೇಹ ಭವನ ಪಧ್ಧತಿಯಲ್ಲಿ ವಿಶೇಷ ಸೇವೆಸಲ್ಲಿಸಿದ ಅಗಲ್ಪಾಡಿ ಶಾಲೆಯ ಸ್ಕೌಟ್ ಅಧ್ಯಾಪಕÀ ಹರಿನಾರಾಯಣ ಮತ್ತು ರವಿರಾಜ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಗಲ್ಪಾಡಿ ಶಾಲೆಯ ಅಧ್ಯಾಪಕ ವೃಂದ,ರಕ್ಷಕ ಶಿಕ್ಷಕ ಸಂಘ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು. ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕುಂಬಳೆ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜರಗಿದ ಶಿಬಿರಕ್ಕೆ ಸ್ಕೌಟ್ ಅಧ್ಯಾಪಕ ಸೂರ್ಯನಾರಾಯಣ ಮತ್ತು ಗೈಡ್ ಅಧ್ಯಾಪಕಿ ಚಂದ್ರಾವತಿ ನಾಯಕತ್ವ ನೀಡಿದ್ದರು.
ಅಗಲ್ಪಾಡಿ ಶಾಲೆಯ ನಿವೃತ್ತ ಸ್ಕೌಟ್ ಅಧ್ಯಾಪಕರಾದ ಅಚ್ಚುತ. ಕೆ, ಗೈಡ್ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ ಧರ್ಮಶೀಲ.ಪಿ. ಹಾಗೂ ಲೀಲಾವತಿ.ಕೆ ಶಿಬಿರಾಗ್ನಿ ಉದ್ಘಾಟಿಸಿ ತಮ್ಮ ಸ್ಕೌಟಿಂಗ್ ಹಾಗೂ ಗೈಡಿಂಗ್ ನ ಗತಕಾಲದ ಅನುಭವಗಳನ್ನು ಹಂಚಿಕೊಂಡರು. ಶಿಬಿರದ ವೈದ್ಯರಾಗಿ ಡಾ.ಶೈನಾ ರಾಜೇಶ್ ಸಹಕರಿಸಿದರು. ಉಪಜಿಲ್ಲಾ ಕಾರ್ಯದರ್ಶಿ ಪ್ರಶಾಂತ್, ಶೈಲಜ, ರಾಜು ಕಿದೂರು, ಅವಿನಾಶ್ ಕಾರಂತ, ಸಿಸ್ಟರ್ ಅಶ್ವಿನಿ, ವಿಜಯ್ ಕುಮಾರ್, ಶಿವರಂಜನ್, ವಿನಯ್ ಪಾಲ್, ಸುಲಲಿತ ,ಗುರುವಾಯುರಪ್ಪನ್ ಮೊದಲಾದವರು ಸಹಕರಿಸಿದರು.
ಮಕ್ಕಳಿಗೆ ಮುದ ನೀಡಿದ ಸಾಹಸಿಕ ಚಟುವಟಿಕೆಗಳು:
ಅಲುಗಾಡುವ ಏಣಿ, ಚಕ್ರಗಳನ್ನು ಏರಿ,ಮರದ ಏಣಿ,ಮಹಡಿ ಹತ್ತಿ, ಬಾಸ್ಕೆಟ್ ಬಾಲ್, ನದಿ ದಾಟು, ಮೆಸ್ಸಿ, ಇಂಡಿಯನ್ ಆರ್ಮಿ,ಗಾಲ್ಪ್ ಮೊದಲಾದ ಸಾಹಸಿಕ ಚಟುವಟಿಕೆಗಳು ಮಕ್ಕಳಿಗೆ ಸಾಹಸಮಯ ಅನುಭವವನ್ನು ಒದಗಿಸಿತು. ಪಟಲಾಂ ನಾಯಕರ ಶಿಬಿರ ವರ್ಷಂಪ್ರತಿ ನಡೆಯಿತ್ತಿದ್ದರೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಾಹಸಿಕ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಹಾವುಗಳ ಪರಿಚಯ ಹಾಗೂ ಅವುಗಳ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರದ ಬಗ್ಗೆ ಅಧ್ಯಾಪಕ ರಾಜು ಕಿದೂರು ತರಗತಿ ನಡೆಸಿದ್ದೂ ಮಕ್ಕಳಿಗೆ ವಿಶೇಷ ಅನುಭವವನ್ನು ನೀಡಿತು.