ಬದಿಯಡ್ಕ: ಬೀಜಂತಡ್ಕ ಅಂಗನವಾಡಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ ಧ್ವಜಾರೋಹಣಗೈದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಪೆರ್ಮುಖ ಈಶ್ವರ ಭಟ್ ಪಾಲ್ಗೊಂಡಿದ್ದರು. ಆಶಾ ಕಾರ್ಯಕರ್ತೆ ಲೀಲಾವತಿ ಕನಕಪಾಡಿ ಕೌಮಾರ ಪ್ರಾಯದ ಮಕ್ಕಳ ಸಮಸ್ಯೆಗಳ ಪರಿಹಾರ ಮಾರ್ಗಗಳ ಕುರಿತು ತರಗತಿ ನಡೆಸಿದರು. ಮುಖ್ಯಶಿಕ್ಷಕಿ ಚಂದ್ರಾವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.