ಮಲಪ್ಪುರಂ: ಆರ್‍ಎಸ್‍ಎಸ್ ವಿರುದ್ಧ ಸುಳ್ಳು ಪ್ರಚಾರ ಮಾಡಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಹುಲ್ ಮಂಕೂಟತ್ತಿಲ್ ಹಾಗೂ ಲೇಖಕಿ ಸಲಾಮಾ ಅವರಿಗೆ ಲಾಯರ್ ನೋಟಿಸ್ ನೀಡಲಾಗಿದೆ.
ಮಲಪ್ಪುರಂನಲ್ಲಿ ಫ್ಯಾಸಿಸ್ಟ್ ವಿರೋಧಿ ಸಂಗಮ ಹೆಸರಿನಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಹಾತ್ಮ ಗಾಂಧಿ ಅವರನ್ನು ಆರ್‍ಎಸ್‍ಎಸ್ ಹತ್ಯೆ ಮಾಡಿದೆ ಎಂಬ ಹೇಳಿಕೆ ವಿರುದ್ಧ ಲಾಯರ್ ನೋಟಿಸ್ ನೀಡಲಾಗಿದೆ.
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಆರೆಸ್ಸೆಸ್‍ಗೆ ಕ್ಷಮೆಯಾಚಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧವೂ ರಾಹುಲ್ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.
ಆರ್‍ಎಸ್‍ಎಸ್ ಮಲಪ್ಪುರಂ ವಿಭಾಗದ ಸಹ ಕಾರ್ಯದರ್ಶಿ ಕೃಷ್ಣ ಕುಮಾರ್ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸುವಂತೆ ನೋಟಿಸ್ ಕಳುಹಿಸಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯಾದ್ಯಂತ ಕಾನೂನು ಬಾಹಿರ ಪೋಸ್ಟರ್‍ಗಳನ್ನು ಹಾಕಿದ್ದಕ್ಕಾಗಿ ಆರ್‍ಎಸ್‍ಎಸ್ ಪರ ವಕೀಲರು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾರಿಸ್ ಮುತ್ತೂರ್, ಉಪಾಧ್ಯಕ್ಷರಾದ ನಿದೀಶ್, ಪ್ರಜಿತ್ ಮತ್ತು ವಿಶ್ವನಾಥನ್ ವಿರುದ್ಧವೂ ನೋಟಿಸ್ ಕಳುಹಿಸಿದ್ದಾರೆ.