ಕಾಸರಗೋಡು: ಮಂಗಳೂರಿನ ಪಿ ವಿ ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ, 52ಕೃತಿ ಬಿಡುಗಡೆ, ರಾಜ್ಯಮಟ್ಟದ ಕವಿಗೋಷ್ಠಿ, ರಾಜ್ಯಮಟ್ಟದ ಕನ್ನಡ ಸೇವಾ ಪ್ರತಿಭೆಗಳಿಗೆ "ಕನ್ನಡ ತಿಲಕ "ರಾಜ್ಯಪ್ರಶಸ್ತಿ 2024 ಪ್ರದಾನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಸಂಸ, ಬಯಲು ರಂಗ ಮಂಟಪದಲ್ಲಿ ನಡೆಯಿತು.
ಈ ಸಂದರ್ಭ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ "ಉಚಿತ ವಸತಿ ವ್ಯವಸ್ಥೆ ", ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಮುಂತಾದ ಕನ್ನಡ ಸೇವಾ ರೂವಾರಿಯಾದ, ವಾಮನ್ ರಾವ್ ಬೇಕಲ್ ಅವರಿಗೆ "ಕನ್ನಡ ತಿಲಕ ರಾಜ್ಯ ಪ್ರಶಸ್ತಿ 2024 ನೀಡಿ ಗೌರವಿಸಲಾಯಿತು.
ಕಥಾಬಿಂದು ಪ್ರಕಾಶನ ರೂವಾರಿ ಪಿ ವಿ ಪ್ರದೀಪ್ ಕುಮಾರ್, ಕೆ ಪಿ ಲಕ್ಷಣ ಮೂರ್ತಿ, ಡಾ ಕೊಳ್ಚಪ್ಪೆ ಗೋವಿಂದ ಭಟ್, ಶ್ರೀಮತಿ ಇಂದಿರಾ, ಲತಾ ಕೆ ಎಸ್ ಹೆಗಡೆ, ವೀಣಾ ಆರ್ ಕಾರಂತ್, ಭವ್ಯ ಸುಧಾಕರ್ ಜಗಮನೆ, ಗಾಯತ್ರಿ ಸುರೇಂದ್ರ, ರೇಷ್ಮಾ ಶೆಟ್ಟಿ ಹಾಸನ, ಹಾಗೂ ಅಪೂರ್ವ ಕಾರಂತ್, ಸುಭಾಷಿನಿ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.