ಬದಿಯಡ್ಕ: 2024 ಜನವರಿಯಲ್ಲಿ ಜರುಗಿದ ಅಂತರರಾಷ್ಟ್ರೀಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಪ್ರಣತಿ ಎನ್. ಪುದುಕೋಳಿ ಸಿಲ್ವರ್ ಟೋಪರ್ ಆಗಿ ತೇರ್ಗಡೆಯಾಗಿರುತ್ತಾಳೆ. ಬದಿಯಡ್ಕ ಪದ್ಮಶ್ರೀ ಟ್ಯುಟೋರಿಯಲ್ಸ್‍ನಲ್ಲಿ ಮಧುರಾ ಹೆಗಡೆ ಹಾಗೂ ಅಶ್ವಿನಿ ರಾಜ್ ಪಟ್ಟಾಜೆ ಇವರಿಂದ ಅಬಕಾಸ್ ತರಬೇತಿ ಪಡೆಯುತ್ತಿರುವ ಈಕೆ ಗೋವಿಂದ ಪ್ರಸಾದ್ ಎನ್.ವಿ. ಹಾಗೂ ಸೌಮ್ಯಾ ಜಿ. ಇವರ ಪುತ್ರಿ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ 6ನೇ ತರಗತಿಯ ವಿದ್ಯಾರ್ಥಿನಿ.