ಕಾಸರಗೊಡು: ಕುಂಬಳೆ ಗ್ರಾಮ ಪಂಚಾಯಿತಿಯ ತ್ಯಾಜ್ಯ ಸಂಗ್ರಹ ಕೇಂದ್ರ ಎಂಸಿಎಪ್ ಘಟಕದ ಹೊರಭಾಗದಲ್ಲಿ ನಿರ್ಲಕ್ಷ್ಯವಾಗಿ ತ್ಯಾಜ್ಯ ಸುರಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಸ್ಕ್ವೇಡ್ 10ಸಾವಿರ ರೂ. ದಂಡ ವಿಧಿಸಿದೆ.
ಜನಸಾಮಾನ್ಯರಿಗೆ ಬೋಧನೆ ನೀಡಿ, ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಳ್ಳಬೇಕಾದ ಪಂಚಾಯಿತಿ ಸ್ವತ: ತೆರೆದ ಪ್ರದೇಶದಲ್ಲಿ ತ್ಯಜ್ಯ ಸುರಿದಿರುವುದಕ್ಕೆ ಈ ದಂಡ ಹೇರಲಾಗಿದೆ. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರೆದ ಪ್ರದೇಶದಲ್ಲಿ ಸುರಿದಿರುವ ಬಗ್ಗೆ ಕುಂಬಳೆಯ ಮಹಮ್ಮದ್ ರಇಫಾಯಿ ಎಂಬವರ ಮಾಲಿಕತ್ವದ ಕಟ್ಟಡ, ಬಿ.ಎಸ್ ಅಬ್ದುಲ್ಲ ಹಾಗೂ ಆಯಿಷಾ ಎಂಬವರ ಮಾಲಿಕತ್ವದ ಬಾಡಿಗೆ ಕಟ್ಟಡ, ಪರಸರವನ್ನು ಶುಚೀಕರಿಸದಿರುವ ಬಗ್ಗೆ ಎಂ. ಪ್ರಶಾಂತ್ ಎಂಬವರಿಗೂ ಎನ್‍ಫೋರ್ಸ್‍ಮೆಂಟ್ ಸ್ಕ್ವೇಡ್ ದಂಡ ಹೇರಿದೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಪಂಚಾಯಿತಿಗೆ ಆದೇಶ ನೀಡಲಾಗಿದೆ. ಟಿ.ವಿ ಶಾಜಿ, ಎಂ.ಟಿ.ಪಿ ರಿಯಾಸ್, ಇ.ಕೆ ಫಾಸಿಲ್, ಪಿ.ವಿ ಸೌಮ್ಯಾ ಕಾಯಚರನೆ ನಡೆಸಿದ್ದರು.