ಬದಿಯಡ್ಕ: ಕರ್ನಾಟಕದ ಹೊಸಹಳ್ಳಿಯ ಪ್ರಸಿದ್ಧ ವಯಲಿನ್ ವಾದಕ ವಿದ್ವಾನ್ ಹೊಸಹಳ್ಳಿ ಕೆ.ವೆಂಕಟರಾಮನ್ ಅವರಿಂದ ಬಳ್ಳಪದವು ವೀಣಾವಾದಿನಿಯ 25ನೇ ವಾರ್ಷಿಕೋತ್ಸವದ ಸಂದಭರ್À ಶನಿವಾರ ಬೆಳಗ್ಗೆ ವಯಲಿನ್ ಕಛೇರಿ ಪ್ರದರ್ಶನಗೊಂಡಿತು. ಅವರೊಂದಿಗೆ ವಿದ್ವಾನ್ ಹೊಸಹಳ್ಳಿ ಕೆ.ಸುಬ್ಬರಾವ್, ವಿದ್ವಾನ್ ಹೊಸಹಳ್ಳಿ ವಿ.ರಘುರಾಮ್ ಜೊತೆಗೂಡಿ ಕಾರ್ಯಕ್ರಮ ನಡೆಸಿಕೊಟ್ಟರು. ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಪುತ್ತೂರು, ಘಟಂನಲ್ಲಿ ಮಂಜೂರು ಉಣ್ಣಿಕೃಷ್ಣನ್ ಉತ್ತಮ ಸಾಥ್ ನೀಡಿ ಗಮನಸೆಳೆದರು. ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಸ್ವಾಗತಿಸಿ, ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ವಂದಿಸಿದರು.