ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬ ಆರೋಗ್ಯ ಕೇಂದ್ರದ ಪಾಲಿಟೀವ್ ಕೇರ್ ಯೋಜನೆ 1 ರ ಸಾಂತ್ವನ ಪರಿಪಾಲನೆ-ಸ್ನೇಹ ಸಂಗಮ ಎಂಬ ವಿಶಿಷ್ಟ ಕಾರ್ಯಕ್ರಮ ಪೆರ್ಲದ ಭಾರತೀ ಸದನದಲ್ಲಿ ಜರಗಿತು.
ಅನಾರೋಗ್ಯಕ್ಕೊಳಗಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಹಾಗೂ ವಯೋ ವೃದ್ಧರ ಪರಿಪಾಲನೆಯ ಯೋಜನೆಗೊಳಪಟ್ಟವರಿಗಾಗಿ ಏರ್ಪಡಿಸಿದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಆರೋಗ್ಯ ಮತ್ತು ಶಿಕ್ಷಣಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಜಾನಪದ ಅಕಾಡೆಮಿ(ಪೋಕ್ ಲೋರ್ ಆಕಾಡೆಮಿ) ಪ್ರಶಸ್ತಿ ಪುರಸ್ಕøತ ಜಾನಪದ ಗಾಯಕ ಸುಭಾಷ್ ಅರುವಿಕರೆ ಮುಖ್ಯ ಅತಿಥಿಗಳಾಗಿದ್ದರು. ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್, ಗ್ರಾ.ಪಂ.ಸದಸ್ಯರಾದ ರಾಮಚಂದ್ರ ಎಂ, ರಮ್ಲ, ಉಷಾ ಕುಮಾರಿ, ಇಂದಿರಾ, ಝರೀನಾ, ನರಸಿಂಹ ಪೂಜಾರಿ,ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ,ಹೋಮಿಯೋ ವೈದ್ಯಾಧಿಕಾರಿ ಡಾ.ಜೆಸ್ಸಿ ಮರಿಯಾ, ಆಯುರ್ವೇದ ವೈದ್ಯಾಧಿಕಾರಿ ಡಾ.ದೀಪ್ತಿ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಂತ್ವನ ಯೋಜನೆಗೊಳಪಟ್ಟವರಿಗೆ ಬೆಡ್ ಶೀಟ್ ವಿತರಿಸಲಾಯಿತು. ಪಾಲೇಟಿವ್ ದಾದಿ ಜೋಸ್ಮಿ ಜಾರ್ಜ್ ವರದಿ ಮಂಡಿಸಿದರು. ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗ್ರೀಷ್ಮಾ ಸ್ವಾಗತಿಸಿ ಪ್ರಭಾರ ಆರೋಗ್ಯ ಪರಿವೀಕ್ಷಕ ಸಜಿತ್ ವಂದಿಸಿದರು. ಬಳಿಕ ಆಶಾ ಕಾರ್ಯಕರ್ತೆಯರಿಂದ ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.