ತಿರುವನಂತಪುರಂ: ಕೇರಳವು ಕೇರ್ (ಏಂಖe: ಏeಡಿಚಿಟಚಿ ಂgಚಿiಟಿsಣ ಖಚಿಡಿe ಆiseಚಿses) ಎಂಬ ಸಮಗ್ರ ಯೋಜನೆಯನ್ನು ಪ್ರಾರಂಭಿಸುತ್ತಿದೆ.
ರೋಗಗಳನ್ನು ತಡೆಗಟ್ಟಲು, ಅವುಗಳನ್ನು ಮೊದಲೇ ಪತ್ತೆಹಚ್ಚಲು, ಲಭ್ಯವಿರುವ ಸಂದರ್ಭಗಳಲ್ಲಿ ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡಲು, ಔಷಧೇತರ ಚಿಕಿತ್ಸೆಗಳನ್ನು ಒದಗಿಸಲು, ತಾಂತ್ರಿಕ ಸಹಾಯಕ ಸಾಧನಗಳನ್ನು ಒದಗಿಸಲು, ಮನೆ-ಕೇಂದ್ರಿತ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ನೆರವು ಸೇವೆಗಳನ್ನು ಒಳಗೊಂಡಿರುವ ಸಮಗ್ರ ಆರೈಕೆ ಯೋಜನೆಯನ್ನು ರಾಜ್ಯ ಸರ್ಕಾರವು ಗುರಿಯಾಗಿಸಿಕೊಂಡಿದೆ. ಪೋಷಕರಿಗೆ ಮಾನಸಿಕ ಮತ್ತು ಸಾಮಾಜಿಕ ಬೆಂಬಲ ಕೂಡಾ ಇದು ಖಚಿತಪಡಿಸಲಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಾಳೆ(ಫೆಬ್ರವರಿ 6) ಮಧ್ಯಾಹ್ನ 3.30 ಕ್ಕೆ ತಿರುವನಂತಪುರಂನ ಟ್ಯಾಗೋರ್ ಥಿಯೇಟರ್‍ನಲ್ಲಿ 61 ನಗರ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು 31 ಪ್ರತ್ಯೇಕ ವಾರ್ಡ್‍ಗಳ ಕೇರ್ ಯೋಜನೆಯ ಅಧಿಕೃತ ಘೋಷಣೆ ಮತ್ತು ರಾಜ್ಯ ಮಟ್ಟದ ಉದ್ಘಾಟನೆಯನ್ನು ಮಾಡಲಿದ್ದಾರೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧ್ಯಕ್ಷತೆ ವಹಿಸುವರು. ಸ್ಥಳೀಯಾಡಳಿತ ಇಲಾಖೆ ಸಚಿವ ಎಂ.ಬಿ. ರಾಜೇಶ್, ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಪರೂಪದ ಕಾಯಿಲೆ ಚಿಕಿತ್ಸಾ ಕ್ಷೇತ್ರದಲ್ಲಿ ಕೇರಳಕ್ಕೆ ಇದೊಂದು ನಿರ್ಣಾಯಕ ಹೆಜ್ಜೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಮೊದಲ ಬಾರಿಗೆ ಎಸ್ ಎ ಟಿ ಆಸ್ಪತ್ರೆಯಲ್ಲಿ ಎಸ್ ಎಂಎ. ಕ್ಲಿನಿಕ್ ಪ್ರಾರಂಭವಾಯಿತು. ಇದರ ನಂತರ ಅಪರೂಪದ ಕಾಯಿಲೆಗಳಿಗೆ ದುಬಾರಿ ಔಷಧಗಳನ್ನು ನೀಡುವ ಯೋಜನೆ ಮತ್ತು ಲೈಸೋಸೋಮಲ್ ಸ್ಟೋರೇಜ್ ರೋಗಗಳಿಗೆ ಔಷಧಗಳನ್ನು ನೀಡುವ ಯೋಜನೆ. ಎರಡೂ ಯೋಜನೆಗಳಲ್ಲಿ 61 ಮಕ್ಕಳಿಗೆ ಔಷಧ ನೀಡಲಾಗಿದೆ. ಎಸ್ ಎ ಟಿ ಆಸ್ಪತ್ರೆಯನ್ನು ಅಪರೂಪದ ಕಾಯಿಲೆಗಳ ಶ್ರೇಷ್ಠ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ. ಈ ಯೋಜನೆಯ ಮೂಲಕ ಒಬ್ಬ ರೋಗಿಗೆ ಗರಿಷ್ಠ 50 ಲಕ್ಷ ರೂ.ವರೆಗೆ ಚಿಕಿತ್ಸೆ ನೀಡಬಹುದಾಗಿದೆ. ಆದರೆ ವಾಸ್ತವವೆಂದರೆ ಈ ಮೊತ್ತವು ಅನೇಕ ರೋಗಗಳ ಪ್ರಸ್ತುತ ಚಿಕಿತ್ಸೆಗಳಿಗೆ ಸಾಕಾಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಪರೂಪದ ಕಾಯಿಲೆಗಳಿಗೆ ಸಮಗ್ರ ಚಿಕಿತ್ಸಾ ಯೋಜನೆ ಜಾರಿಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದರು.