ಬೆಂಗಳೂರು: ಬಾಲಿವುಡ್ ನಟಿ ಪೂನಂ ಪಾಂಡೆ ವಿಧಿವಶರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ ಇದೀಗ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಇದೀಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ಪೂನಂ ಫೆ.2 ರಂದು ಇಹಲೋಕ ತ್ಯಜಿಸಿದ್ದಾರೆ.
ಸರ್ವಿಕಲ್ ಕ್ಯಾನ್ಸರ್‌ನಿಂದ ನಮ್ಮ ಪ್ರೀತಿಯ ಪೂನಂ ಪಾಂಡೆ ಅವರು ಸಾವನ್ನಪ್ಪಿದ್ದಾರೆ.
ನಿಜ.. ದೇಶದಲ್ಲಿ ಪ್ರತಿ ವರ್ಷ 1 ಲಕ್ಷದ 30 ಸಾವಿರ ಮಹಿಳೆಯರಲ್ಲಿ ಗರ್ಭ ಕಂಠ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಈ ಪೈಕಿ 75 ಸಾವಿರ ಮಹಿಳೆಯರು ಪ್ರತಿ ವರ್ಷ ಭಾರತದಲ್ಲಿ ಜೀವ ಬಿಡುತ್ತಿದ್ದಾರೆ. ಭಾರತದಲ್ಲಿ ಪ್ರತಿ 7 ನಿಮಿಷಕ್ಕೆ ಓರ್ವ ಮಹಿಳೆ ಗರ್ಭ ಕಂಠ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದು 2010ರ ಅಂಕಿ ಅಂಶ. 2024ರ ಅಂಕಿ ಅಂಶ ಇನ್ನು ಹೆಚ್ಚಾಗಿರುವ ಸಾಧ್ಯತೆ ಇದೆ.
ಗರ್ಭಕಂಠವು ಗರ್ಭಕೋಶದ ಅತ್ಯಂತ ಕೆಳಗಿನ ಅಂಗ, ಇದು ಗರ್ಭಕೋಶವನ್ನು ಸ್ತ್ರೀ ಯೋನಿಯೊಂದಿಗೆ ಸಂಪರ್ಕಿಸುತ್ತದೆ. ಸಾಮಾನ್ಯವಾಗಿ ದೀರ್ಘಕಾಲದ ಲೈಂಗಿಕ ಚಟುವಟಿಕೆಯಿಂದ ಪ್ಯಾಪಿಲೋಮವೈರಸ್ (HPV) ಸೋಂಕು ತಗುಲುತ್ತದೆ. ಇದರಿಂದ ಗರ್ಭಕಂಠದ ಕ್ಯಾನ್ಸರ್ ಬರುವುದು. 30 ಮತ್ತು 65 ವರ್ಷ ವಯೋಮಾನದ ಒಳಗಿನ ಪ್ರತಿ ಮಹಿಳೆಯೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೆ ಒಳಗಾಗಬೇಕು, ಈ ವಯಸ್ಸಿನಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ಕ್ರೀನಿಂಗ್ ಪರೀಕ್ಷೆಗಳು ಮತ್ತು HPV ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಪಡೆಯುವುದು ಉತ್ತಮ.
ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು..?: ಸೋಂಕಿನ ಆರಂಭಿಕ ಅವಧಿಯಲ್ಲಿ ಮಹಿಳೆಯರಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಗೊಳಪಡದೆ ದೀರ್ಘಕಾಲ ಇದ್ದಷ್ಟು ಅದರ ಲಕ್ಷಣಗಳು ಹೊರಕಾಣುವ ಸಾಧ್ಯತೆ ಹೆಚ್ಚು. ಜನನಾಂಗದಲ್ಲಿ ಅಸಹಜ ಮತ್ತು ಅಸಾಧಾರಣ ಪ್ರಮಾಣದಲ್ಲಿ ರಕ್ತ ಸ್ರಾವ, ಲೈಂಗಿಕ ಸಂಪರ್ಕದ ವೇಳೆ ಮತ್ತು ಮೂತ್ರವಿಸರ್ಜನೆಯ ಸಂದರ್ಭದಲ್ಲಿ ನೋವು, ಲೈಂಗಿಕ ಸಂಪರ್ಕದ ಬಳಿಕ ರಕ್ತಸ್ರಾವ, ಋತುಚಕ್ರದ ಅವಧಿಯಲ್ಲಿ ಬೆನ್ನು ನೋವು, ತುರಿಕೆ ಮತ್ತು ಉರಿ, ಹೆಚ್ಚು ಆಯಾಸ, ತುರ್ತು ಮೂತ್ರ ವಿಸರ್ಜನೆ, ಹೊಟ್ಟೆ ಉಬ್ಬರ ಕಂಡು ಬಂದರೆ ವೈದ್ಯ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು.
ಗರ್ಭಕಂಠದ ಕ್ಯಾನ್ಸರ್ ಅನ್ನು ಹೇಗೆ ನಿಯಂತ್ರಿಸುವುದು?
* ಜನನ ನಿಯಂತ್ರಣ ಮಾತ್ರೆಗಳನ್ನು ಹೆಚ್ಚು ಸೇವಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚು. ಹೀಗಾಗಿ ಇವುಗಳಿಂದ ದೂರವಿರಬೇಕು. HPV ಸೋಂಕಿರುವ ಪುರುಷರೊಂದಿಗೆ ಲೈಂಗಿಕತೆಗೆ ಒಳಪಟ್ಟಾಗ ಸೋಂಕು ಮಹಿಳೆಯರಿಗೆ ತಗುಲುತ್ತದೆ. ಇದರಿಂದ ವೈರಸ್ ದೇಹದಲ್ಲಿ ಬೆಳವಣಿಗೆಯಾಗಿ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.
* 30 ವರ್ಷಗಳ ನಂತರ ಮಹಿಳೆಯರು ನಿಯಮಿತ ಪ್ಯಾಪ್ ಸ್ಮಿಯರ್ ಮತ್ತು ದ್ರವ-ಆಧಾರಿತ ಸೈಟೋಲಜಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ. ದಿಪ್ಯಾಪ್ ಪರೀಕ್ಷೆ ಮತ್ತು HPV ಪರೀಕ್ಷೆಯು ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಅಥವಾ ಅದನ್ನು ಮೊದಲೇ ಕಂಡುಹಿಡಿಯಬಹುದು.
* ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಬೊಜ್ಜು ಹೊಂದಿರುವ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.
* ಧೂಮಪಾನದಿಂದ ಗರ್ಭಕಂಠದ ಕ್ಯಾನ್ಸರ್ ಉಂಟಾಗುತ್ತದೆ. ಅದೇ ರೀತಿ ಎಚ್ಐವಿ, ಏಡ್ಸ್ನಂತಹ ಕಾಯಿಲೆಯಿರುವವರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆ ಇರುತ್ತದೆ.
* ದಿನನಿತ್ಯದ ವ್ಯಾಯಾಮವು ಕ್ಯಾನ್ಸರ್ ರೋಗಿಗಳಲ್ಲಿ ಒತ್ತಡ ಕಡಿಮೆ ಮಾಡಿ ಮತ್ತು ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚು ಸುಧಾರಿಸಬಹುದು ಎಂದು ತಿಳಿದುಬಂದಿದೆ.