ಕುಂಬಳೆ: ಶಾಸಕರ ಆಸ್ತಿ ಅಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡ ಕುಂಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಬಳೆ - ಶೇಡಿಮೂಲೆ ರಸ್ತೆಯನ್ನು ಶಾಸಕ ಎ.ಕೆ.ಎಂ.ಅಶ್ರಫ್ ಶನಿವಾರ ಉದ್ಘಾಟಿಸಿದರು.
ಕುಂಬಳೆ-ಶೇಡಿಮೂಲೆ ರಸ್ತೆಯು ಸ್ಥಳೀಯ ನಿವಾಸಿಗಳ ದೀರ್ಘಾವಧಿಯ ಪ್ರಯಾಣದ ಸಂಕಷ್ಟವನ್ನು ಪರಿಹರಿಸಿದೆ. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಜಮೀಲಾ ಸಿದ್ದೀಕ್, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಬೂರ, ಬ್ಲಾಕ್ ಪಂಚಾಯಿತಿ ಸದಸ್ಯೆ ಪ್ರೇಮಾ ಶೆಟ್ಟಿ, ವಾರ್ಡ್ ಸದಸ್ಯೆ ಶೋಭಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಅಬ್ಬಾಸ್, ಅಜೀಜ್ ಮರಿಕೆ, ಬಿ.ಎನ್.ಮುಹಮ್ಮದಲಿ, ರವಿ ಪೂಜಾರಿ, ಅಬ್ದುಲ್ ರಹಿಮಾನ್ ಉದಯ, ಕುಂಞಪ್ಪ ಮುಸ್ಲಿಯಾರ್, ಸಿದ್ದೀಕ್ ದಂಡೆಗೋಳಿ, ಹನೀಫ್ ಮಳಿ ಮೊದಲಾದವರು ಮಾತನಾಡಿದರು.