ತಿರುವನಂತಪುರ: ಪ್ರಯಾಣಿಕರಿಂದ ಅನಿಸಿದಂತೆ ದರವನ್ನು ಪಡೆಯುವ ಅಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಂ.ವಿ.ಡಿ ಸಿದ್ದತೆ ನಡೆಸಿದೆ.
ದರಗಳನ್ನು ಗುರುತಿಸಲು ರಾಜ್ಯದ ಎಲ್ಲಾ ಅಧಿಕೃತ ಆಟೋ ಸ್ಟ್ಯಾಂಡ್‍ಗಳಲ್ಲಿ ಇಂತಹ ಬೋರ್ಡ್‍ಗಳನ್ನು ಅಳವಡಿಸಲು ಎಂವಿಡಿ ಪ್ರಸ್ತಾಪಿಸಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಆರ್‍ಟಿಒ ಮತ್ತು ಜಂಟಿ ಆರ್‍ಟಿಒಗಳಿಗೆ ಸೂಚಿಸಿದ್ದಾರೆ.
ಎಂವಿಡಿ ಈ ಹಿಂದೆ ಆಟೋಗಳಲ್ಲಿ ದರವನ್ನು ಪ್ರದರ್ಶಿಸುವ ಪ್ರಸ್ತಾಪವನ್ನು ನೀಡಿತ್ತು. ಇದಲ್ಲದೇ ಆಟೋ ಸ್ಟ್ಯಾಂಡ್‍ಗಳಿಗೂ ಬೋರ್ಡ್ ಅಳವಡಿಸಲು ನಿರ್ಧರಿಸಲಾಗಿದೆ. ಆಟೊ ಚಾಲಕರು ಪ್ರಯಾಣ ದರದ ಹೆಸರಿನಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಪ್ರಮಾಣದಲ್ಲಿ ಸುಲಿಗೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ದರವನ್ನು ಪ್ರದರ್ಶಿಸಲು ನಿರ್ದೇಶನ ನೀಡಲಾಗಿದೆ. ಕನಿಷ್ಠ 1.30 ಕಿ.ಮೀ ದೂರಕ್ಕೆ ವಿಧಿಸಬಹುದಾದ ಮೊತ್ತ ರೂ.30.ಮಾತ್ರ. 26 ಕಿ.ಮೀಗೆ 398 ಮತ್ತು ರೂ.ಪಡೆಯಬಹುದು. ಈ ಮಾಹಿತಿಯನ್ನು ಪಟ್ಟಿಯಲ್ಲಿ ಸೇರಿಸಲು ಎಂವಿಡಿ ಆಟೋ ಚಾಲಕರಿಗೆ ನಿದೇಶಿಸಿದೆ. ಇದರ ಜತೆಗೆ ಹೆಚ್ಚುವರಿ ದರ ವಿಧಿಸಿದರೆ ದಂಡದ ಮಾಹಿತಿಯನ್ನೂ ಪಟ್ಟಿಯಲ್ಲಿ ಸೇರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.