ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಕೇರಳ ಜಲ ಪ್ರಾಧಿಕಾರದ ವಿತರಣಾ ಕೊಳವೆಗಳನ್ನು ಬದಲಾಯಿಸಿ ಅಳವಡಿಸುವ ಕಾರ್ಯಕ್ಕಾಗಿ ಫೆ.3ರಂದು ಕಾಸರಗೋಡು ನಗರಸಭೆ, ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮುನ್ನೆಚ್ಚರಿಕೆ ವಹಿಸಿ ಜಲ ಪ್ರಾಧಿಕಾರದೊಂದಿಗೆ ಸಹಕರಿಸಬೇಕು ಎಂದು ಕೇರಳ ಜಲ ಪ್ರಾಧಿಕಾರದ ಡಬ್ಲ್ಯುಎಸ್‍ಪಿ ಉಪವಿಭಾಗ ಕಾಸರಗೋಡು ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.