ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಆರಂಭಗೊಂಡಿತು. ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಕುಂಟಾರು ಹಾಗೂ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿ ಕುಂಟಾರು ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುತ್ತಿದೆ.
ಬೆಳಗ್ಗೆ ಧ್ವಜಾರೋಹಣ, ನವಕಾಭಿಷೇಕ, ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ ವಠಾರದಿಂದ ದೇವಸ್ಥಾನ ವರೆಗೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ಉಗ್ರಾಣ ಭರಣ ಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ರೂಪಕ ನಡೆಯಿತು.
2ರಂದು ಬೆಳಗ್ಗೆ 8ಕ್ಕೆ 108ಕಾಯಿ ಗಣಪತಿ ಹವನ, ಸಂಜೆ 5.30ಕ್ಕೆ ನೃತ್ಯ ಕಲರವ, ಭರತನಾಟ್ಯ-ನೃತ್ಯ ಪಲ್ಲವ ಕಾರ್ಯಕ್ರಮ ನಡೆಯುವುದು. 3ರಂದು ಬೆಳಗ್ಗೆ 8ಕ್ಕೆ ಚಂಡಿಕಾ ಹವನ, ತುಲಾಭಾರ, ಸಂಜೆ 6ಕ್ಕೆ ಕಜಂಬು ಉತ್ಸವ, ರಾತ್ರಿ 8ಕ್ಕೆ ಶ್ರೀ ಉಳ್ಳಾಲ್ತೀ ಭಂಡಾರ ಹೊರಡುವುದು, ಶ್ರೀ ಉಳ್ಳಾಲ್ತಿಯ ಅಶ್ವರಥ ಸವಾರಿ, ಶ್ರೀ ಉಳ್ಳಾಲ್ತೀ ನೇಮ ನಡೆಯುವುದು. 4ರಂದು ಬೆಳಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 7ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, ತೊಡಙಲ್, ರಾತ್ರಿ 8ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ಕುಳಿಚ್ಚಾಟ, ಸಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಹರಿಕಥಾ ಸತ್ಸಂಗ, ಭಕ್ತಿಗಾನ ಸಂಗೀತ, ರಾತ್ರಿ 10ಕ್ಕೆ ಮ್ಯೂಸಿಕಲ್ ನೈಟ್ ನಡೆಯುವುದು. 5ರಂದು ಬೆಳಗ್ಗೆ 4ಕ್ಕೆ ಒತ್ತೆಕೋಲ, ಕೆ<ಡಸೇವೆ, , ಮಧ್ಯಾಹ್ನ 12.30ಕ್ಕೆ ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯುವುದು.