ಕೊಚ್ಚಿ: ದೇವಸ್ವಂ ಸಚಿವ ಕೆ. ್ಲ ರಾಧಾಕೃಷ್ಣನ್ ಅವರು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಗಳು ತಾರತಮ್ಯ ಮತ್ತು ಮೂರ್ಖತನದಿಂದ ಕೂಡಿದೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈರೋಡ್ ರಾಜನ್ ಅವರು ಹೇಳಿದ್ದಾರೆ.
ಅಯ್ಯಪ್ಪ ಭಕ್ತರನ್ನು ಅವಹೇಳನಕಾರಿಯಾಗಿ ಉಲ್ಲೇಖಿಸಿರುವುದು ಯಾತ್ರಾರ್ಥಿಗಳಿಗೆ ಸವಾಲಾಗಿದೆ. ನಡೆದ ಘಟನೆಗಳಿಗೆ ವಿಷಾದ ವ್ಯಕ್ತಪಡಿಸದೆ ಅಯ್ಯಪ್ಪ ಭಕ್ತರ ತಲೆಯ ಮೇಲೆ ಆರೋಪ ಹೊರಿಸುವ ಕಮ್ಯುನಿಸ್ಟ್ ಪ್ರವೃತ್ತಿ ಸಚಿವರ ಮೂಲಕ ಎದ್ದು ಕಾಣುತ್ತಿದೆ ಎಂದು ಈರೋಡ್ ರಾಜನ್ ಗಮನ ಸೆಳೆದರು.
ಸರ್ಕಾರ ಹಾಗೂ ದೇವಸ್ವಂ ಮಂಡಳಿಯ ನಿರ್ಲಕ್ಷ್ಯದಿಂದ ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ, ಪಂದಳಂ ಮುಂತಾದ ವಿವಿಧ ದೇವಸ್ಥಾನಗಳಿಗೆ ತೆರಳಿ ವಾಪಸಾಗಬೇಕಾದ ಸಾವಿರಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ಮಾಹಿತಿ ಅಯ್ಯಪ್ಪ ಸೇವಾ ಸಮಾಜದಲ್ಲಿದೆ. ಅದನ್ನು ಬಹಿರಂಗಪಡಿಸಿದರೆ ರಾಧಾಕೃಷ್ಣನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ. ಪೋಲೀಸರಿಂದ ಥಳಿತಕ್ಕೊಳಗಾದ ಭಕ್ತರ ಮಾಹಿತಿಯೂ ಸಮಾಜದ ಬಳಿ ಇದೆ. ಇದೆಲ್ಲವನ್ನೂ ಸೇರಿಸಿ ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೊದಲಾದವರಿಗೆ ಅಯ್ಯಪ್ಪ ಸೇವಾ ಸಮಾಜ ಬೃಹತ್ ಮನವಿ ಸಲ್ಲಿಸಲಿದೆ.
ತೀರ್ಥಯಾತ್ರೆ ಅವಧಿಯಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿರುವುದು ಸಚಿವರಿಗೆ ಗೊತ್ತಿಲ್ಲ ಎಂದರೆ ಅದು ಅವರ ಮೂರ್ಖತನವೇ ಸರಿ. ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಶಾಸಕಾಂಗವನ್ನು ವಂಚಿಸುತ್ತಿದ್ದರೆ ಅದು ಜಗತ್ತಿನಾದ್ಯಂತ ಇರುವ ಅಯ್ಯಪ್ಪ ಭಕ್ತರಿಗೆ ಅವರ ತಾರತಮ್ಯ ಧೋರಣೆಯ ಸಾಕ್ಷಿಯಾಗಲಿದೆ. ದೇವಸ್ವಂ ಮಂಡಳಿ, ಸರ್ಕಾರ ಅಥವಾ ಪೋಲೀಸರನ್ನು ನಂಬಿ ಶಬರಿಮಲೆಗೆ ಬರಬಾರದು ಎಂಬ ಸೂಚನೆಯನ್ನು ಈ ತೀರ್ಥಯಾತ್ರೆ ನೀಡಿದೆ. ಅಯ್ಯಪ್ಪ ಭಕ್ತರ ಕಲ್ಯಾಣಕ್ಕಾಗಿ ಅಯ್ಯಪ್ಪ ಭಕ್ತರೆಲ್ಲ ಸಂಘಟಿತರಾಗಿದ್ದಾರೆ ಎಂದು ಸೂಚಿಸಿರುವರು.
ಈರೋಡ್ ರಾಜನ್ ಮಾತನಾಡಿ, ದೇವಸ್ವಂ ಸಚಿವರ ಅವಾಚ್ಯ ಶಬ್ದಗಳಿಂದ ನಲುಗಿದ ವಿಧಾನಸಭೆಯ ಎಲ್ಲ ಸದಸ್ಯರಿಗೆ ಅಯ್ಯಪ್ಪ ಸೇವಾ ಸಮಾಜ ಪ್ರತಿಭಟನೆ ವ್ಯಕ್ತಪಡಿಸುತ್ತದೆ ಎಂದಿರುವರು.