ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯತಿ ಕುಟುಂಬ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಸ್ನೇಹ ಸಂಗಮ ನಡೆಯಿತು. ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವನ್ನು ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಉದ್ಘಾಟಿಸಿದರು. ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ರತ್ನಾಕರ ಎಂ. ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಡಾ.ರೋಜನ್ ಜೋಸೆಫ್ ವರದಿ ಮಂಡಿಸಿದರು. ಕಾರಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜನನಿ, ಸದಸ್ಯರಾದ ಪುಷ್ಪಾ, ಚಂದ್ರಕಲ, ಸಂತೋಷ್ ಸಿ.ಎನ್, ವೇಣುಗೋಪಾಲ್ ಕೆ, ತಂಬಾನ್ ಎಂ, ಸತ್ಯವತಿ ಎಸ್.ಆರ್, ಪ್ರಸಿಜ ಎ, ರೂಪ ಸತ್ಯನ್, ಸಿ.ಡಿ.ಎಸ್. ಅಧ್ಯಕ್ಷೆ ಸವಿತಾ ನಾರಾಯಣನ್ ಮೊದಲಾದವರು ಶುಭಹಾರೈಸಿದರು.
ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಜಾಫರ್ ಟಿ. ಸ್ವಾಗತಿಸಿ, ಕುಟುಂಬ ಆರೋಗ್ಯ ಕೇಂದ್ರ ಸ್ಟಾಫ್ ನರ್ಸ್ ಸೀಮಾ ಕೆ.ವಿ. ವಂದಿಸಿದರು.