ಬದಿಯಡ್ಕ: ಸಂಗೀತಕ್ಕೆ ಮನಸ್ಸನ್ನು ಶುದ್ಧೀಕರಿಸುವ ವಿಶಿಷ್ಟ ಶಕ್ತಿಯಿದ್ದು, ಮನರಂಜನೆಯ ಜತೆಗೆ ಮನುಷ್ಯರನ್ನು ಆಧ್ಯಾತಿಕತೆಯಡೆಗೆ ಕೊಂಡೊಯ್ಯುವ ಪ್ರಬಲ ಮಾಧ್ಯಮವಾಗಿದೆ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಬದಿಯಡ್ಕದ ನಾರಂಪಾಡಿ ಸಮೀಪದ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಶ್ರೀಮಂತಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯೋಗ ಮತ್ತು ವೈದಿಕ ತಾಂತ್ರಿಕ ಸಂಪ್ರದಾಯಗಳನ್ನು ಸಮನ್ವಯಗೊಳಿಸುವ ಮಹಾ ಸಂಗೀತ ಸಮ್ಮೇಳನ ಹಾಗೂ ವೀಣಾವಾದಿನಿ ಸಂಗೀತ ವೇದಿಕ್ ತಾಂತ್ರಿಕ ವಿದ್ಯಾಪೀಠದ 25ನೇ ವರ್ಷಾಚರಣೆಯ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕ್ರತಿಯ ಅನುಭೂತಿಗೆ ಸಂಗೀತದಂತಹ ಕಲೆಗಳು ಪ್ರೇರಣಾ ಶಕ್ತಿಯಾಗಿದೆ ಎಂದು ತಿಳಿಸಿದರು.
ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಆಶಯ ಭಾಷಣ ಮಾಡಿ, ಭೌತಿಕ ವ್ಯವಸ್ಥೆ ಜೀವನದಲ್ಲಿ ನಮ್ಮನ್ನು ಎತ್ತರಕ್ಕೆರಿಸುವಮತೆ, ವೇದ-ನಾದ-ಯೋಗವೂ ನಮ್ಮನ್ನು ಉನ್ನತಿಗೇರುವಲ್ಲಿ ಪ್ರೇರೇಪಿಸುತ್ತದೆ. ಒಂದು ಲಕ್ಷ್ಯದೆಡೆಗೆ ದಾರಿ ಕಂಡುಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ಪದ್ಮಶ್ರೀ ಪುರಸ್ಕøತ ಸತ್ಯನಾರಾಯಣ ಬೆಳೇರಿ ಅವರನ್ನು ವಿದ್ಯಾಪೀಠದ ವತಿಯಿಂದ ಗೌರವಿಸಲಾಯಿತು. ಕುಂಬ್ಡಾಜೆ ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಮವ್ವಾರ್, ಮ್ರದಂಗ ವಾದಕ ದಿನೇಶ್ ಕೆ.ಬಿ.ಆರ್, ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ಮಾಂಜೂರ್ ಉಣ್ಣಿಕೃಷ್ಣನ್, ಚೆರ್ತಲ ಕೃಷ್ಣಕುಮಾರ್, ಮಾಞÂಯೂರ್ ರಂಜನ್, ಯೋಗ ಶಿಕ್ಷಕ ಪ್ರವೀಣ್ ಕುಮಾರ್, ಕಿಶೋರ್, ವೈಕ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾಪೀಠ ಸಂಚಾಲಕ, ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರಮಣಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಮಾಧವನ್ ನಂಬೂದಿರಿ ವಂದಿಸಿದರು.
ಫೆ.3ರಂದು ಹೊಸಹಳ್ಳಿ ಕೆ. ವೆಂಕಟ್ರಾಮ್, ಹೊಸಹಳ್ಳಿ ಕೆ. ಸುಬ್ಬರಾವ್ ಹಾಗೂ ಹೊಸಹಳ್ಳಿ ವಿ. ರಾಘವನ್ ಅವರಿಂದ ದ್ವಂದ್ವ ಪಿಟೀಲು ನಡೆಯಲಿದೆ. ಸಂಗೀತ ಕಾರ್ಯಕ್ರಮ, ಗುರು ಪೂಜೆ, ಬಳಿಕ ಹರಿಪ್ರಸಾದ ಸುಬ್ರಹ್ಮಣ್ಯನ್ ಅವರಿಂದ ಕೊಳಲುವಾದನ ನಡೆಯಲಿದೆ. ಸಂಜೆ 7ರಿಂದ ವಿನಿತಾ ನೆಡುಂಗಡಿ ಅವರಿಂದ ಮೋಹಿನಿಯಾಟ್ಟಂ ಜರುಗಲಿದೆ.
ಫೆ.4ರಂದು ಬೆಳಗ್ಗೆ ಯೋಗ ಶಿಕ್ಷಕ ಪ್ರವೀಣ್ ಕುಮಾರ ಅವರಿಂದ ಹಠ ಯೋಗ, ಪಂಚರತ್ನ ಕೃತಿಯ ಆಲಾಪನೆ, ಅಪರಾಹ್ನ ವಾಗ್ಗೇಯಕಾರ ಡಾ. ಎಂ ಬಾಲಮುರಳೀಕೃಷ್ಣ ಸಂಸ್ಮರಣೆ, ಸಂಜೆÀ ವೀಣಾವಾದಿನಿ ಪುರಸ್ಕಾರ ಪ್ರದಾನ ನಡೆಯಲಿದೆ. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು.