ನವದೆಹಲಿ: ಕ್ರಿಪ್ಟೋ ಕರೆನ್ಸಿ ಮತ್ತು ಸೈಬರ್ ಅಪರಾಧಗಳ ಹೆಚ್ಚಳವು ಹೊಸ ಸವಾಲಾಗಿ ಪರಿಣಮಿಸಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ನ್ಯಾಯ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ನವದೆಹಲಿ: ಕ್ರಿಪ್ಟೋ ಕರೆನ್ಸಿ ಮತ್ತು ಸೈಬರ್ ಅಪರಾಧಗಳ ಹೆಚ್ಚಳವು ಹೊಸ ಸವಾಲಾಗಿ ಪರಿಣಮಿಸಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ನ್ಯಾಯ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಇಲ್ಲಿ ಶನಿವಾರ ನಡೆದ ಕಾಮನ್‌ವೆಲ್ತ್ ಅಟಾರ್ನಿಗಳು ಮತ್ತು ಸಾಲಿಸಿಟರ್ ಜನರಲ್‌ಗಳ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
'ವಿವಿಧ ದೇಶಗಳು ವಾಯುಯಾನ ಮತ್ತು ಜಲಯಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜೊತೆಯಾಗಿ ಕೆಲಸ ಮಾಡುತ್ತಿದ್ದು, ಅದು ತನಿಖೆ ಮತ್ತು ನ್ಯಾಯಾಂಗ ವ್ಯವಸ್ಥೆಗೂ ವಿಸ್ತರಣೆಯಾಗಬೇಕು' ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
'ಕೆಲವೊಮ್ಮೆ ಒಂದು ದೇಶವು ನ್ಯಾಯ ಒದಗಿಸುವುದಕ್ಕೆ ಮತ್ತೊಂದು ದೇಶದ ಸಹಕಾರ ಬೇಕಾಗುತ್ತದೆ. ದೇಶಗಳ ಪರಸ್ಪರ ನ್ಯಾಯವ್ಯಾಪ್ತಿಯನ್ನು ಗೌರವಿಸುತ್ತಲೇ ಜೊತೆಯಾಗಿ ಕೆಲಸ ಮಾಡಲು ಸಾಧ್ಯವಿದೆ. ದೇಶಗಳ ನಡುವೆ ಪರಸ್ಪರ ಸಹಕಾರವಿದ್ದರೆ, ನ್ಯಾಯವ್ಯಾಪ್ತಿ ಎನ್ನುವುದು ನ್ಯಾಯದಾನದ ಸಾಧನವಾಗುತ್ತದೆಯೇ ಹೊರತು ನ್ಯಾಯ ವಿಳಂಬವಾಗಲು ಕಾರಣವಾಗುವುದಿಲ್ಲ' ಎಂದು ಅವರು ಹೇಳಿದರು.