ಕುಂಬಳೆ: ಪುತ್ತಿಗೆ ನಿವಾಸಿ, ಖಾಸಗಿ ಬಸ್ ಮಾಲಿಕ ನಾರಾಯಣ ಕುರುಪ್(60)ಅಲ್ಪ ಕಾಲದ ಅನಾರೋಗ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಬುಧವಾರ ಮನೆಗೆ ಕರೆತರಲಾಗಿತ್ತು. ಆದೂರು-ಕಾಸರಗೋಡು-ಸೀತಾಂಗೋಳಿ ಮಾರ್ಗವಾಗಿ ಸಂಚರಿಸುವ ಶ್ರೀ ದುರ್ಗಾ ಬಸ್‍ನ ಮಾಲೀಕರಾಗಿದ್ದರು. ಸಿಪಿಎಂ ಪುತ್ತಿಗೆ ಸ್ಥಳೀಯ ಸಮಿತಿ ಸದಸ್ಯರಾಗಿದ್ದ ಇವರು, ಈ ಹಿಂದೆ ಕೆಎಸ್‍ಆರ್‍ಟಿಸಿ ಬಸ್ ಚಾಲಕರಾಗಿ ನಿವೃತ್ತರಾಗಿದ್ದರು. ಪುತ್ತಿಗೆ ಎಸ್.ಕೆ.ಎಸ್ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು. ಉತ್ತಮ ಕಬಡ್ಡಿ ಪಟುವಾಗಿದ್ದ ಇವರು ಎಸ್‍ಕೆಎಸ್ ಸಂಘಟನೆಯ ಹಿರಿಯ ಸದಸ್ಯರಾಗಿದ್ದರು. ಪುತ್ತಿಗೆ ಶ್ರೀ ಕುಮಾರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಕಿನ್ನಿಮಾಣಿ ದೈವಸ್ಥಾನದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.