ಕಾಸರಗೋಡು: ನಿಜಾಮುದ್ದೀನ್-ಎರ್ನಾಕುಳಂ ಮಂಗಳಾ ಎಕ್ಸ್‍ಪ್ರೆಸ್ ರೈಲಿನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲನ್ನು ನೀಲೇಶ್ವರ ನಿಲ್ದಾಣ ಬಳಿ ಅರ್ಧ ತಾಸಿಗೂ ಹೆಚ್ಚುಕಾಲ ತಡೆಹಿಡಿಯಬೇಕಾಯಿತು.
ಬುಧವಾರ ಬೆಳಗ್ಗೆ 8ಕ್ಕೆ ರೈಲು ನೀಲೇಶ್ವರ ನಿಲ್ದಾಣ ಸಮೀಪಿಸುತ್ತಿದ್ದಂತೆ ಐದನೇ ಬೋಗಿಯ ತಳಭಾಗದಿಂದ ಹೊಗೆ ಕಾಣಿಸಿಕೊಂಡಿರುವುದನ್ನು ನಿಲ್ದಾಣದಲ್ಲಿದ್ದ ಮಹಿಳೆಯೊಬ್ಬರು ಗಮನಿಸಿ ಸ್ಟೇಶನ್ ಮಾಸ್ಟರ್‍ಗೆ ಮಾಹಿತಿ ನೀಡಿದ್ದರು. ತಕ್ಷಣ ರೈಲ್ವೆ ಇಂಜಿನಿಯರಿಂಗ್ ವಿಭಾಗ ಸಿಬ್ಬಂದಿ ಆಗಮಿಸಿ ದುರಸ್ತಿಕಾರ್ಯ ಕೈಗೊಂಡ ಬಳಿಕ ರೈಲು ಪ್ರಯಾಣ ಮುಮದುವರಿಸಿದೆ. ರೈಲಿನ ಬ್ರೇಕಿನಿಂದ ಹೊಗೆ ಹೊರಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.