ಕಾಸರಗೋಡು: ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ವೆಳ್ಳಿಕೋತ್ ಕುಞÂಪುರ ನಿವಾಸಿ ವಿಶಾಕ್ ಯಾನೆ ಜಿತ್ತು(24)ಎಂಬಾತನನ್ನು 'ಕಾಪಾ'ಅನ್ವಯ ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರ ನಿರ್ದೇಶದನ್ವಯ ಡಿವೈಎಸ್‍ಪಿ ಎಂ.ಪಿ ವಿನೋದ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ.ಚಂದೇರ, ಹೊಸದುರ್ಗ ಠಾಣೆ ವ್ಯಾಪ್ತಿಯಲ್ಲಿ ನಡೆದ ಹತ್ಯಾಯತ್ನ, ಕಳವು, ಹೊಡೆದಾಟ, ಗಾಂಜಾ ಸಾಗಾಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಈತ ಆರೋಪಿಯಾಘಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.