ತಿರುವನಂತಪುರ: ವಿಶ್ವವಿದ್ಯಾನಿಲಯಗಳಿಗೆ ಶೋಧನಾ ಸಮಿತಿ ರಚನೆಗೆ ಪ್ರತಿನಿಧಿಗಳನ್ನು ನೀಡಲು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೂಚಿಸಿದ್ದಾರೆ.
ಉಪಕುಲಪತಿಗಳ ನೇಮಕಾತಿಗಾಗಿ ಶೋಧನಾ ಸಮಿತಿಗೆ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳನ್ನು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ರಾಜಭವನ ಸೂಚಿಸಿದೆ. ಕೇರಳ, ಎಂಜಿ, ಕುಸಾಟ್, ಕಣ್ಣೂರು, ಮಲಯಾಳಂ, ಕೆಟಿಯು, ಕೃಷಿ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯಗಳ ವಿಸಿಗಳಿಗೆ ರಾಜಭವನದಿಂದ ಪತ್ರಗಳನ್ನು ಕಳುಹಿಸಲಾಗಿದೆ.
ಒಂದು ತಿಂಗಳೊಳಗೆ ಶೋಧನಾ ಸಮಿತಿಗೆ ಪ್ರತಿನಿಧಿಗಳನ್ನು ಒದಗಿಸಲು ವಿಶ್ವವಿದ್ಯಾಲಯಗಳು ಸಿದ್ಧವಾಗಬೇಕು. ಇಲ್ಲದಿದ್ದರೆ, ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ರಾಜ್ಯಪಾಲರು ತಮ್ಮದೇ ಆದ ಶೋಧನಾ ಸಮಿತಿಯನ್ನು ರಚಿಸುವರು ಮತ್ತು ವಿ.ಸಿ. ನೇಮಕಾತಿ ಪ್ರಕ್ರಿಯೆ ಮುಂದುವರಿಸುವುದಾಗಿಯೂ ಪತ್ರದಲ್ಲಿ ಹೇಳಲಾಗಿದೆ. ಕೇರಳದ ಹಲವು ವಿಶ್ವವಿದ್ಯಾಲಯಗಳು ಪ್ರಸ್ತುತ ತಾತ್ಕಾಲಿಕ ವಿಸಿಗಳನ್ನು ಹೊಂದಿವೆ.
ಇದೇ ವೇಳೆ ಕೇರಳ ವಿ.ವಿ. ವಿ.ಸಿ. ಡಾ. ಮೋಹನನ್ ಕುನ್ನುಮೋಲ್ ಶೋಧನಾ ಸಮಿತಿಯ ಪ್ರತಿನಿಧಿಯನ್ನು ಆಯ್ಕೆ ಮಾಡಲು ಫೆಬ್ರವರಿ 16 ರಂದು ಸೆನೆಟ್ ಸಭೆ ಕರೆಯಲು ರಿಜಿಸ್ಟ್ರಾರ್‍ಗೆ ಸೂಚಿಸಲಾಯಿತು.