ಪೆರ್ಲ: ಎಣ್ಮಕಜೆ ಪಂಚಾಯಿತಿ ಬಾಳೆಮೂಲೆ ಜಿ. ಎಲ್. ಪಿ. ಶಾಲೆಯಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಗತಿ ಆರಂಭಗೊಂಡಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಶಶಿಧರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಳೆವೆಯಿಂದಲೇ ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಮೂಡಿಬಂದಾಗ ಕಲೆಯ ಜತೆಗೆ ಭಾಷಾ ಪ್ರ್ವಢಿಮೆ ಹೆಚ್ಚಾಗಲು ಸಾಧ್ಯವಗುವುದು ಎಂದು ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ಸಿ. ಯ ಅಧ್ಯಕ್ಷ ಮಾಲಿಂಗ. ಕೆ. ಉಪಸ್ಥಿತರಿದ್ದರು. ಶಾಲೆಯ ಹಳೇ ವಿದ್ಯಾರ್ಥಿ ಸ್ಕಂದ ಸಿ. ಯಸ್. ಪೆÇೀಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಕ್ಷಗಾನ ಗುರುಗಳ ಕಿರುಪರಿಚಯವನ್ನು ಮಾಡಿದರು. ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಬಿ ಸ್ವಾಗತಿಸಿದರು. ಶಿಕ್ಷಕಿ ಸಹನಾ. ಕೆ. ವಂದಿಸಿದರು. ಯಕ್ಷ ಧ್ರುವ ಪಟ್ಲ ಯಕ್ಷ ಶಿಕ್ಷಣದ ಯಕ್ಷ ಗುರು ಬಾಲಕೃಷ್ಣ ಏಳ್ಕಾನ ಇವರಿಂದ ಯಕ್ಷಗಾನ ನಾಟ್ಯ ತರಗತಿ ಆರಂಭಗೊಂಡಿತು.