ಕಾಸರಗೋಡು: ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಜಿಲ್ಲೆಯ ಆಯ್ದ 80 ಮಂದಿ ಸಮಾಂತರ ಕಲಿಕೆದಾರರಿಗಾಗಿ ಮೂರು ದಿನಗಳ ಕಾಳ ನಡೆದ ಕಾರ್ಯಕರ್ತರ ಅಧ್ಯಯನ ಶಿಬಿರ ಸಂಪನ್ನಗೊಂಡಿತು. ಕೊಡಕ್ಕಾಡ್‍ನ ಕದಲಿವನಂನಲ್ಲಿ ನಡೆದ ಸಮಾರಂಭದಲ್ಲಿ ಕಿಲಾ ಸಂಪನ್ಮೂಲ ವ್ಯಕ್ತಿ ಮತ್ತು ಸಾಕ್ಷರತಾ ಸಮಿತಿಯ ಸದಸ್ಯ ಪಪ್ಪನ್ ಕುಟ್ಟಮತ್ ಶಿಬಿರ ಉದ್ಘಾಟಿಸಿದರು. ವಿವಿಧ ವಿಷಯಗಳಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಯ ಸದಸ್ಯ ಕೆ.ವಿ.ರಾಘವನ್, ಹಿರಿಯ ಜಲವಿಜ್ಞಾನಿ ಡಾ.ಎ.ಪ್ರಭಾಕರನ್, ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ಸಜೀವನ್ ಕುಯಿಲೂರು, ಸಾಕ್ಷರತಾ ಮಿಷನ್ ಪ್ರಾದೇಶಿಕ ಸಂಯೋಜಕ ಶಾಜು ಜಾನ್, ಜಿಲ್ಲಾ ಮಣ್ಣು ಸರ್ವೇಕ್ಷಣಾ ಅಧಿಕಾರಿಗಳಾದ ನಿರಂಜ್ ಬಾಬು, ಜೇಮಿ ಸ್ಟೀಫನ್, ಹಿರಿಯ ಜಲತಜ್ಞ ಡಾ.ಕೆ.ಎಂ.ಎ.ಅಶ್ರಫ್, ಸೆಕ್ಷನ್ ರೇಂಜ್ ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ನವ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಸ್ವಚ್ಛತಾ ಮಿಷನ್ ಜಿಲ್ಲಾ ಕಾರ್ಯಕ್ರಮಾಧಿಕಾರಿ ಕೆ.ವಿ.ರಂಜಿತ್ ಹಾಗೂ ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು ತರಗತಿ ನಡೆಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸಮಾರೋಪ ಸಮಾರಂಭ ಉದ್ಘಾಟಿಸಿ ಪ್ರಮಾಣಪತ್ರ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಭಾಷಣ ಮಾಡಿದರು. ಪ್ರಾದೇಶಿಕ ಸಂಯೋಜಕ ಶಾಜು ಜಾನ್ ಸಮಾರೋಪ ಸಂದೇಶ ನೀಡಿದರು. ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಸ್ವಚ್ಛತಾ ಮಿಷನ್ ಜಿಲ್ಲಾ ಕಾರ್ಯಕ್ರಮಾಧಿಕಾರಿ ಕೆ.ವಿ.ರಂಜಿತ್, ಕೆ.ಪಿ.ಮುರಳೀಧರನ್, ಸಿ.ಕೆ.ನಾಸರ್ ಉಪಸ್ಥಿತರಿದ್ದರು.