ಕೊಚ್ಚಿ: ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ದೇಶಕ್ಕೆ ಸಲ್ಲಿಸುತ್ತಿರುವ ಸೇವೆ ಮಹತ್ತರವಾದುದು ಎಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದರು.
ಕರಾವಳಿ ಭದ್ರತೆಯನ್ನು ಒದಗಿಸುವಲ್ಲಿ ಐಸಿಜಿ ಪ್ರಮುಖ ಪಾತ್ರ ವಹಿಸುತ್ತದೆ. ಸೇನೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಅವರು ನಮ್ಮ ಗಡಿಯನ್ನು ರಕ್ಷಿಸುವ ವಿಶಿಷ್ಟ ವರ್ಗ ಎಂದು ರಾಜ್ಯಪಾಲರು ಹೇಳಿದರು.
ಭಾರತೀಯ ಕೋಸ್ಟ್ ಗಾರ್ಡ್ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯನಾಗಿರುವುದಕ್ಕೆ ಹೆಚ್ಚು ಹೆಮ್ಮೆ ಅನಿಸುತ್ತಿದೆ. ಕೋಸ್ಟ್ ಗಾರ್ಡ್ ನ ಪ್ರತಿಯೊಬ್ಬ ಸದಸ್ಯರಿಗೂ ಅಭಿನಂದನೆಗಳು. ಅವರು ಒದಗಿಸುವ ಭದ್ರತೆಯಲ್ಲಿ ಎಲ್ಲರೂ ಚೆನ್ನಾಗಿ ನಿದ್ರಿಸುತ್ತಾರೆ. ಆತ್ಮನಿರ್ಭರ ಭಾರತದ ಅಂಗವಾಗಿ ನಿರ್ಮಿಸಲಾದ ಹಡಗುಗಳು ಸಮಾರಂಭದಲ್ಲಿ ಭಾಗವಹಿಸಿದ್ದವು. ಇದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.