ಮುಳ್ಳೇರಿಯ: ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಮಂದಿರದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಇತ್ತೀಚೆಗೆ "ಅಗ್ರಪೂಜೆ" ಯಕ್ಷಗಾನ ತಾಳಮದ್ದಳೆ ನಡೆಯಿತು.
ಸಾನಿಧ್ಯ ಶ್ರೀಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆಯೊಂದಿಗೆ ತಾಳಮದ್ದಳೆಗೆ ಚಾಲನೆ ನೀಡಲಾಯಿತು. ಬಳಿಕ ಕಲಾಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಅವರ ಹಿರಿತನದಲ್ಲಿ ಜರುಗಿದ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ, ಚೆಂಡೆ ಮದ್ದಳೆಗಳಲ್ಲಿ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ ಬೆಳ್ಳಿಪ್ಪಾಡಿ ಸಹಕರಿಸಿದರು.
ಅರ್ಥಧಾರಿಗಳಾಗಿ ವೆಂಕಟರಮಣ ಮಾಸ್ತರ್ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು, ರಾಮಯ್ಯ ರೈ ಕಲ್ಲಡ್ಕಗುತ್ತು, ರಮಾನಂದ ರೈ ದೇಲಂಪಾಡಿ, ಭಾಸ್ಕರ ಮಾಸ್ತರ್ ದೇಲಂಪಾಡಿ, ರಾಮ ನಾಯ್ಕ ಈಶ್ವರಮಂಗಲ, ರಜತ್ ಡಿ.ಆರ್, ಬಿ.ಹೆಚ್. ವೆಂಕಪ್ಪ, ಗೋಪಾಲಕೃಷ್ಣ ಮುದಿಯಾರು ಭಾಗವಹಿಸಿದರು.
ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ ಪ್ರಸ್ತುತಗೊಂಡ ಕಲಾಕಾರ್ಯಕ್ರಮದ ಮೊದಲಿಗೆ ಕುಮಾರಿ ಬಬಿತ ಕೋಟಿಗದ್ದೆ ಸ್ವಾಗತಿಸಿ, ನಂದಕಿಶೋರ ಬನಾರಿ ವಂದಿಸಿದರು.