ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಡನಾಡು ಸಮೂಹ ಗ್ರಾಮ ಕಚೇರಿ ಸ್ಮಾರ್ಟ್ ಆಗಲಿದೆ. 44 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಗ್ರಾಮ ಕಚೇರಿ ಕಟ್ಟಡವನ್ನು ಇಂದು(ಫೆ.3) ರಾಜ್ಯ ಕಂದಾಯ ಸಚಿವ ಕೆ.ರಾಜನ್ ಉದ್ಘಾಟಿಸಲಿದ್ದಾರೆ. ಗ್ರಾ.ಪಂ.ಅಧಿಕಾರಿಗಳ ಕೊಠಡಿ, ದಾಖಲೆ ಕೊಠಡಿ, ವಿಶ್ರಾಂತಿ ಕೊಠಡಿ, ಕಚೇರಿ, ವರಾಂಡ, ಕುಳಿತುಕೊಳ್ಳುವ ಸ್ಥಳ, ಹೆಲ್ಪ್ ಡೆಸ್ಕ್, ಶೌಚಾಲಯ ಸೌಲಭ್ಯವಿರುವ ಒಂದೇ ಅಂತಸ್ತಿನ ಕಟ್ಟಡ ಪೂರ್ಣಗೊಂಡಿದೆ. ಕುಂಬಳೆ-ಸೀತಾಂಗೋಳಿ ರಸ್ತೆಯ ಸೂರಂಬೈಲಲ್ಲಿರುವ ಹಳೆ ಗ್ರಾಮ ಕಚೇರಿ ಕಟ್ಟಡದ ಬಳಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಗ್ರಾಮಾಧಿಕಾರಿ ಸೇರಿ 3 ಜನ ನೌಕರರಿದ್ದಾರೆ. ಕಟ್ಟಡವನ್ನು 1256 ಚ.ಅಡಿಯಲ್ಲಿ ನಿರ್ಮಿಸಲಾಗಿದೆ.