ಗುವಾಹಟಿ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಸ್ಸಾಂನ ಗುವಾಹಟಿ ಲೋಕಸಭಾ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ 100ಕ್ಕೂ ಅಧಿಕ ಮತಗಟ್ಟೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುವಾಹಟಿ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಸ್ಸಾಂನ ಗುವಾಹಟಿ ಲೋಕಸಭಾ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ 100ಕ್ಕೂ ಅಧಿಕ ಮತಗಟ್ಟೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.
ಗುವಾಹಟಿ ಲೋಕಸಭಾ ಕ್ಷೇತ್ರದಲ್ಲಿ 3ನೇ ಹಂತದಲ್ಲಿ ಮೇ 7ರಂದು ಚುನಾವಣೆ ನಡೆಯಲಿದ್ದು, ಕಾಮರೂಪ ಮೆಟ್ರೊಪಾಲಿಟನ್, ಕಾಮರೂಪ ಮತ್ತು ಗೋಲ್ಪಾರ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಕ್ಷೇತ್ರದಲ್ಲಿ 2,181 ಮತಗಟ್ಟೆಗಳಿವೆ. ಆ ಪೈಕಿ 102 ಮತಗಟ್ಟೆಗಳಲ್ಲಿ ಕೇವಲ ಮಹಿಳಾ ಸಿಬ್ಬಂದಿ ಮಾತ್ರ ಇರಲಿದ್ದಾರೆ. ಇದರ ಜೊತೆಗೆ, 15 ಮಾದರಿ ಮತಗಟ್ಟೆಗಳೂ ಇರಲಿವೆ ಎಂದು ಅವರು ಹೇಳಿದ್ದಾರೆ.
ಗುವಾಹಟಿ ಲೋಕಸಭಾ ಕ್ಷೇತ್ರ ಅತ್ಯಂತ ದೊಡ್ಡದಾಗಿದ್ದು, 10 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಾಮರೂಪ ಮೆಟ್ರೊಪಾಲಿಟನ್‌ನಲ್ಲಿ 5, ಕಾಮರೂಪ ಜಿಲ್ಲೆಯಲ್ಲಿ 3 ಮತ್ತು ಗೋಲ್ಪಾರ ಜಿಲ್ಲೆಯಲ್ಲಿ 2 ವಿಧಾನಸಭಾ ಕ್ಷೇತ್ರಗಳಿವೆ.
ಕ್ಷೇತ್ರದಲ್ಲಿ ಒಟ್ಟು 20,19,444 ಮತದಾರರಿದ್ದು, ಆ ಪೈಕಿ 9,93,268 ಪುರುಷರು, 10,26,118 ಮಂದಿ ಮಹಿಳಾ ಮತದಾರರಿದ್ದಾರೆ.