ಕಾಸರಗೋಡು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳು ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಪ್ರತ್ಯೇಕ ನಿರ್ದೇಶ ನೀಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಮಾಧ್ಯಮಗಳ ಮೇಲೆ ವಿಶೇಷ ನಿಗಾಯಿರಿಸಲಾಗುತ್ತಿದೆ.
ಜಿಲ್ಲೆಯಲ್ಲಿ 10,51,111ಲಕ್ಷ ಮತದಾರರು:
ಜಿಲ್ಲೆಯಲ್ಲಿ 5,13,579 ಪುರುಷ ಮತದಾರರು ಮತ್ತು 5,37,525 ಮಹಿಳಾ ಮತದಾರರು ಸೇರಿದಂತೆ ಒಟ್ಟು 10,51,111ಮಂದಿ ಮತದಾರರಿದ್ದಾರೆ. ಇದರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 1,10,362 ಪುರುಷ ಮತದಾರರು ಮತ್ತು 1,09,958 ಮಹಿಳಾ ಮತದಾರರು ಸೇರಿದಂತೆ 2,20,320 ಮತದಾರರಿದ್ದಾರೆ. ಕಾಸರಗೋಡು ಮಂಡಲದಲ್ಲಿ ಅತ್ಯಮತ ಕಡಿಮೆ ಮತದಾರರಿದ್ದಾರೆ. 99,795 ಪುರುಷರು, 1,00,635 ಮಹಿಳೆಯರು ಮತ್ತು ಇಬ್ಬರು ಟ್ರಾನ್ಸ್‍ಜೆಂಡರ್ ಸೇರಿದಂತೆ 2,00,432 ಮತದಾರರಿದ್ದಾರೆ.
ಉದುಮದಲ್ಲಿ 1,04,431 ಪುರುಷ, 1,09,225 ಮಹಿಳೆಯರು, ಮೂವರು ತೃತೀಯಲಿಂಗಿಗಳು ಸೇರಿದಂತೆ 2,13,659 ಮತದಾರರಿದ್ದಾರೆ. ಹೊಸದುರ್ಗ ಮಂಡಲದಲ್ಲಿ 1,03,517 ಮಂದಿ ಪುರುಷರು, 1,12,260 ಮಹಿಳಾ ಮತದಾರರು ಒಬ್ಬ ಟ್ರಾನ್ಸ್‍ಜೆಂಡರ್ ಸೇರಿದಂತೆ ಟ2,15,778 ಮತದಾರರಿದ್ದಾರೆ. ತ್ರಿಕರಿಪುರ ಮಂಡಲದಲ್ಲಿ 95,474 ಪುರುಷರು, 1,05,447,ಮಂದಿ ಮಹಿಳೆಯರು, ಒಬ್ಬ ತೃತೀಯಲಿಂಗಿ ಸೇರಿದಂತೆ 2,00,922 ಮತದಾರರಿದ್ದಾರೆ.