HEALTH TIPS

ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಮನೆಕೆಲಸ ಮಾಡುತ್ತಾರೆ!

           ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿದರೆ ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು, ವೇತನವಿಲ್ಲದ ಮನೆಕೆಲಸ ಹಾಗೂ ಆರೈಕೆ ಕೆಲಸಗಳನ್ನು ಮಾಡುತ್ತಾರೆಂದು ಅಧ್ಯಯನದ ವರದಿಯೊಂದು ಬಹಿರಂಗಪಡಿಸಿದೆ.

            ಮುಂಬೈನಲ್ಲಿರುವ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‌ಎಸ್) ನಡೆಸಿದ ಸಂಶೋಧನೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

            ಭಾರತೀಯ ಮಹಿಳೆಯರು ಪುರುಷರಿಗಿಂತ ಮನೆಕೆಲಸ ಮತ್ತು ಆರೈಕೆಯಂತಹ ವೇತನವಿಲ್ಲದ ಕೆಲಸವನ್ನು 10 ಪಟ್ಟು ಹೆಚ್ಚಾಗಿ ಮಾಡುತ್ತಿದ್ದು, ವಿದ್ಯಾವಂತ ಮಹಿಳೆಯರು ತಮ್ಮ ಕೆಲಸದ ಹೊರೆ ನಿಯಂತ್ರಿಸುವಲ್ಲಿ ಕೊಂಚ ಯಶಸ್ವಿಯಾಗಿದ್ದಾರೆಂದು ವರದಿಯಿಂದ ತಿಳಿದುಬಂದಿದೆ.

         ಭಾರತದಲ್ಲಿ ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ, ವಿವಾಹಿತ ಮಹಿಳೆಯರು ಹೆಚ್ಚಾಗಿ, ಬಹುತೇಕ ದುಪ್ಪಟ್ಟು ವೇತನವಿಲ್ಲದ ಕೆಲಸದ ಹೊರೆ ಹೊಂದಿದ್ದಾರೆ. ಅದರಲ್ಲೂ, ಹಿಂದು, ಮುಸ್ಲಿಂ ಮತ್ತು ಸಿಖ್ ಕುಟುಂಬಗಳ ಮಹಿಳೆಯರು ಹೆಚ್ಚಿನ ಸಮಯವನ್ನು ವೇತನವಿಲ್ಲದ ಮನೆಕೆಲಸಕ್ಕಾಗಿ ವ್ಯಯಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

            ವಿಶ್ವಾದ್ಯಂತ ಮಹಿಳೆಯರು ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಸಮಯವನ್ನು ವೇತನರಹಿತ ಮನೆಕೆಲಸ ಮತ್ತು ಆರೈಕೆ ಕೆಲಸಗಳಲ್ಲಿ ಕಳೆಯುತ್ತಾರೆ. ಆದರೆ, ಭಾರತದಲ್ಲಿನ ಮಹಿಳೆಯರು ಪುರುಷರಿಗಿಂತ ಸುಮಾರು 10 ಪಟ್ಟು ಹೆಚ್ಚು ಸಮಯವನ್ನು ಸಂಬಂಳವಿಲ್ಲದ ಕೆಲಸಕ್ಕಾಗಿ ಕಳೆಯುತ್ತಾರೆ” ಎಂದು ಅಧ್ಯಯನ ವರದಿ ವಿವರಿಸಿದೆ.

               ಶಾಲಾ-ವಯಸ್ಸಿನ ಮಕ್ಕಳನ್ನು ಸಲಹುವುದು ವೇತನವಿಲ್ಲದ ಮನೆಕೆಲಸದಲ್ಲಿ ಮಹಿಳೆಯರ ಹೆಚ್ಚು ಸಮಯವನ್ನು ಕಿತ್ತುಕೊಂಡಿದೆ. ಅಲ್ಲದೆ, ವಿಭಕ್ತ ಕುಟುಂಬದಲ್ಲಿ ವಾಸಿಸುವ ಮಹಿಳೆಯರು, ಅವಿಭಕ್ತ ಕುಟುಂಬಗಳ ಮಹಿಳೆಯರಿಗಿಂತ ವೇತನವಿಲ್ಲದ ಕೆಲಸವನ್ನು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ವರದಿ ಗಮನಸೆಳೆದಿದೆ.

              ಸ್ತ್ರೀ ಪ್ರಧಾನ ಕುಟುಂಬಗಳಲ್ಲಿ ಮಹಿಳೆಯರ ವೇತನರಹಿತ ಕೆಲಸ ಕಡಿಮೆಯಿದ್ದರೆ, ಪುರುಷ ಪ್ರಧಾನ ಕುಟುಂಬಗಳಲ್ಲಿ ಸಂಬಳರಹಿತ ಕೆಲಸ ಹೆಚ್ಚಾಗಿದೆ. ವೇತನವಿಲ್ಲದ ಕೆಲಸಗಳನ್ನು ಮಾರುಕಟ್ಟೆ ಮೌಲ್ಯಗಳ ಆಧಾರದ ಮೇಲೆ ಅಳೆದರೆ, ಆರ್ಥಿಕತೆಗೆ ಮಹಿಳೆಯರ ಕೊಡುಗೆಯು ಅಪಾರವಾಗಿದೆ. ಕೆಲವು ದೇಶಗಳಲ್ಲಿ ಮಹಿಳೆಯರ ವೇತನರಹಿತ ಕೆಲಸವು ಆ ದೇಶದ ಜಿಡಿಪಿಗೆ ಶೇ.10ರಷ್ಟು ಕೊಡುಗೆ ನೀಡಿದರೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಜಿಡಿಪಿಗೆ ಶೇ.60 ಕೊಡುಗೆ ನೀಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಶಿಕ್ಷಣವಿಲ್ಲದ ನಗರ ಪ್ರದೇಶದ ಮಹಿಳೆಯರು, ಶಿಕ್ಷಣವಿಲ್ಲದ ಗ್ರಾಮೀಣ ಪ್ರದೇಶದ ಮಹಿಳೆಯರಿಗಿಂತ ಶೇ.86.7 ಹೆಚ್ಚು ಸಂಬಳವಿಲ್ಲದ ಮನೆಕೆಲಸದಲ್ಲಿ ಸಮಯವನ್ನು ಕಳೆಯುತ್ತಾರೆಂದು ವರದಿ ತಿಳಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries