ಚಂಡೀಗಢ: ಹುಟ್ಟುಹಬ್ಬದಂದು ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 10 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
ಮಾನ್ವಿ (10) ಮೃತ ಬಾಲಕಿ. ಬಾಲಕಿಯ ಹುಟ್ಟುಹಬ್ಬಕ್ಕೆಂದು ಪಟಿಯಾಲದ ಬೇಕರಿಯಿಂದ ಆನ್‌ಲೈನ್ ಮೂಲಕ ಕುಟುಂಬದವರು ಕೇಕ್ ಆರ್ಡರ್ ಮಾಡಿ ತರಿಸಿದ್ದರು.
ಮಾನ್ವಿ ಕೂಡ ತೀರಾ ಬಾಯಾರಿಕೆಯಿಂದ ಆಗಾಗ ನೀರು ಕುಡಿಯುತ್ತಿದ್ದಳು, ಬಳಿಕ ನಿದ್ದೆಗೆ ಜಾರಿದ್ದಳು, ಮರುದಿನ ಬೆಳಿಗ್ಗೆ ಮಾನ್ವಿ ಆರೋಗ್ಯ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ವೆಂಟಿಲೇಟರ್‌ನಲ್ಲಿ ಮಾನ್ವಿಯನ್ನು ಇಡಲಾಗಿತ್ತು. ಇಸಿಜಿ ಸೇರಿದಂತೆ ಇನ್ನಿತರ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದರೂ ಆಕೆ ಬದುಕುಳಿಯಲಿಲ್ಲ ಎಂದು ಮಾನ್ವಿ ತಾತ ಹರ್ಬನ್ ಲಾಲ್ ತಿಳಿಸಿರುವುದಾಗಿ ವರದಿಯಾಗಿದೆ.
ಕೇಕ್‌ನಲ್ಲಿ ವಿಷದ ಅಂಶವನ್ನು ಬೆರೆಸಲಾಗಿತ್ತು ಎಂದು ಕುಟುಂಬ ದೂರಿದೆ. ಸದ್ಯ ಘಟನೆ ಸಂಬಂಧ ಸ್ಥಳೀಯ ಪೊಲೀಸರು ಕೇಕ್ ಅಂಗಡಿ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕೇಕ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.