ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಮಾರ್ಚ್ 11ರಂದು ಬೆಳಗ್ಗೆ 11ಕ್ಕೆ ವಿವಿ ಕ್ಯಾಂಪಸ್‍ನಲ್ಲಿ ನಡೆಯಲಿದೆ. ಪಶ್ಚಿಮ ಬಂಗಾಳ ರಾಜ್ಯಪಾಲ ಡಾ. ಸಿವಿ. ಆನಂದ ಬೋಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಕೇಂದ್ರೀಯ ವಿಶ್ವ ವಿದ್ಯಾಲಯ ಪ್ರಭಾರ ಉಪಕುಲಪತಿ ಪೆÇ್ರ. ಕೆ.ಸಿ. ಬೈಜು ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಸಂಸದ ರಾಜಮೋಹನ್ ಉನ್ನಿಥಾನ್, ರಿಜಿಸ್ಟ್ರಾರ್ ಡಾ.ಎಂ. ಮುರಳೀಧರನ್ ನಂಬಿಯಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್, ವಿಶ್ವವಿದ್ಯಾನಿಲಯದ ಕೋರ್ಟ್ ಸದಸ್ಯರು, ಕಾರ್ಯಕಾರಿ ಮಂಡಳಿ ಸದಸ್ಯರು, ಶೈಕ್ಷಣಿಕ ಪರಿಷತ್ ಸದಸ್ಯರು, ಹಣಕಾಸು ಸಮಿತಿ ಸದಸ್ಯರು, ಸಾರ್ವಜನಿಕ ಪ್ರತಿನಿಧಿಗಳು, ಡೀನ್‍ಗಳು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ಪಾಲ್ಗೊಳ್ಳುವರು.
2023ರಲ್ಲಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಲಿದ್ದು, ಘಟಿಕೋತ್ಸವದ್ಲ್ಲಿ 957 ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆದುಕೊಳ್ಳಲಿದ್ದಾರೆ. ಸಮಾರಂಬದಲ್ಲಿ ನೇರವಾಗಿ ಭಾಗವಹಿಸಲು ಇದುವರೆಗೆ 737 ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. 40 ಮಂದಿಗೆ ಪದವಿ, 843 ಮಂದಿಗೆ ಸ್ನಾತಕೋತ್ತರ ಪದವಿ, 58 ಮಂದಿಗೆ ಪಿಎಚ್‍ಡಿ ಪದವಿ ಹಾಗೂ 16 ಮಂದಿಗೆ ಪಿಜಿ ಡಿಪೆÇ್ಲಮಾ ಪದವಿ ಪ್ರದಾನ ಮಾಡಲಾಗುವುದು. ವಿವಿಧ ಅಧ್ಯಯನ ವಿಭಾಗಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ:ಜೀವರಸಾಯನಶಾಸ್ತ್ರ ಮತ್ತು ಆನ್ವಿಕ ಜೀವಶಾಸ್ತ್ರ 30, ರಸಾಯನಶಾಸ್ತ್ರ 40, ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ 50, ಕಂಪ್ಯೂಟರ್ ವಿಜ್ಞಾನ 36, ಇಂಗ್ಲಿಷ್ ಮತ್ತು ತುಲನಾತ್ಮಕ ಸಾಹಿತ್ಯ 51, ಅರ್ಥಶಾಸ್ತ್ರ 42, ಶಿಕ್ಷಣ 36, ಪರಿಸರ ವಿಜ್ಞಾನ 29, ಜೀನೋಮಿಕ್ ವಿಜ್ಞಾನ 30, ಭೂವಿಜ್ಞಾನ 34, ಹಿಂದಿ ಮತ್ತು ತುಲನಾತ್ಮಕ ಸಾಹಿತ್ಯ 34 ಸಂಬಂಧಗಳು 75, ಕನ್ನಡ 8, ಕಾನೂನು 20, ಭಾಷಾಶಾಸ್ತ್ರ 34, ಮ್ಯಾನೇಜ್ಮೆಂಟ್ ಸ್ಟಡೀಸ್ 36, ಮಲಯಾಳಂ 32, ಗಣಿತ 47, ಭೌತಶಾಸ್ತ್ರ 42, ಸಸ್ಯ ವಿಜ್ಞಾನ 43, ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನಗಳು 26, ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ಔಷಧ 40, ಸೋಶೀಯಲ್ ವರ್ಕ್ 51, ಪ್ರವಾಸೋದ್ಯಮ ಅಧ್ಯಯನಗಳು 34, ಯೋಗ ಅಧ್ಯಯನಗಳು 20, ಪ್ರಾಣಿಶಾಸ್ತ್ರ 37ಮಂದಿಗೆ ಪದವಿ ಪರದಾನ ಮಾಡಲಾಗುವುದು.
ವಿಶ್ವವಿದ್ಯಾನಿಲಯದ ಮೊದಲ ಘಟಿಕೋತ್ಸವವನ್ನು 2014 ರಲ್ಲಿ ನಡೆಸಲಾಗಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಡಾ.ಎಂ. ಮುರಳೀಧರನ್ ನಂಬಿಯಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್, ಡೀನ್ ಅಕಾಡೆಮಿಕ್ ಪೆÇ್ರ. ಅಮೃತ್ ಜಿ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ. ಸುಜಿತ್ ಭಾಗವಹಿಸಿದ್ದರು.