HEALTH TIPS

11ನೇ ಶತಮಾನದ ಕಟ್ಟಡದ ವೈಜ್ಞಾನಿಕ ಸಮೀಕ್ಷೆ ನಡೆಸಲು ASIಗೆ ಹೈಕೋರ್ಟ್‌ ಆದೇಶ

            ಇಂದೋರ್‌: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಮಧ್ಯಕಾಲೀನ ಯುಗದ ಭೋಜಶಾಲಾ ಕಟ್ಟಡದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಧ್ಯಪ್ರದೇಶ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

           'ಹಿಂದಿ ಫ್ರಂಟ್ ಫಾರ್ ಜಸ್ಟಿಸ್' ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್‌. ಎ ಧರ್ಮಾಧಿಕಾರಿ ಮತ್ತು ದೇವನಾರಾಯಣ ಮಿಶ್ರಾ ಅವರಿದ್ದ ವಿಭಾಗಿಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಜತೆಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ.

              11 ನೇ ಶತಮಾನದ ಸ್ಮಾರಕ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂರಕ್ಷಿಸಿರುವ ಈ ಕಟ್ಟಡವನ್ನು ಹಿಂದೂಗಳು ವಾಗ್ದೇವಿ (ಸರಸ್ವತಿ) ದೇವಾಲಯವೆಂದು ಪೂಜಿಸಿದರೆ, ಮುಸ್ಲಿಮರು ಕಮಲ್ ಮೌಲಾ ಮಸೀದಿ ಎನ್ನುತ್ತಾರೆ.

               2003ರಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ರೂಪಿಸಿದ್ದ ವ್ಯವಸ್ಥೆಯ ಪ್ರಕಾರ, ಈ ಭೋಜಶಾಲಾ ಕಟ್ಟಡದಲ್ಲಿ ಪ್ರತಿ ಮಂಗಳವಾರ ಹಿಂದೂಗಳು ವಾಗ್ದೇವಿ ಪೂಜೆ ಮಾಡುತ್ತಾರೆ ಹಾಗೂ ಮುಸ್ಲಿಮರು ಪ್ರತಿ ಶುಕ್ರವಾರ ನಮಾಜ್‌ ಮಾಡುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries